ನವದೆಹಲಿ, ಜ 30 (Daijiworld News/MB) : ನಿರ್ಭಯಾ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಓರ್ವನಾದ ಅಕ್ಷಯ್ ಕುಮಾರ್ ಸಿಂಗ್ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದು ಕ್ಯುರೇಟಿವ್ ಅರ್ಜಿ ವಿಚಾರಣೆ ಇಂದು ನಡೆಯಲಿದೆ.
ಪ್ರಕರಣದ ಮತ್ತೋರ್ವ ಅಪರಾಧಿ ವಿನಯ್ ಶರ್ಮಾ ಮತ್ತೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರಿಗೆ ಬುಧವಾರವಷ್ಟೇ ಸಲ್ಲಿಸಿದ್ದಾನೆ. ಮತ್ತೋರ್ವ ಅಪರಾಧಿ ಮುಖೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿತ್ತು.
ಅಕ್ಷಯ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿ ಜಸ್ಟಿಸ್ ಎನ್ ವಿ ರಮಣ ನೇತೃತ್ವದ ಪಂಚ ಸದಸ್ಯರ ಪೀಠದಲ್ಲಿ ಇಂದು ವಿಚಾರಣೆ ನಡೆಯಲಿದೆ. ಆದರೆ ಈ ವಿಚಾರಣೆ ಬಹಿರಂಗವಾಗಿ ನಡೆಯದೆ ಚೇಂಬರ್ ನಲ್ಲಿ ನಡೆಯಲಿದೆ.
ನ್ಯಾಯಾಲಯವು ಮಹಿಳೆಯರ ಮೇಲಿನ ಹಿಂಸೆಯ ವಿಚಾರದಲ್ಲಿ ಸಾರ್ವಜನಿಕ ಒತ್ತಡ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂಬು ಎಂದು ತನಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ ಎಂದು ಅರ್ಜಿಯ ಮೂಲಕ ಅಪರಾಧಿ ಅಕ್ಷಯ್ ಸಿಂಗ್ ವಾದ ಮಾಡಿದ್ದಾನೆ.