ಮಂಡ್ಯ, ಜ 30 (Daijiworld News/MB) : "ಶಾಸಕ ನಾಯಣಗೌಡ ಅವರು ಬಿಎಸ್ಪಿಯಿಂದ ಜೆಡಿಎಸ್ಗೆ ಹೋದರು, ಆದರೆ ತನಗೆ ಸ್ಥಾನಮಾನ ದೊರೆಯಲಿಲ್ಲ ಎಂದು ಬಿಜೆಪಿಗೆ ಹೋಗಿದ್ದಾರೆ. ಇನ್ನು ಅಲ್ಲಿಯೂ ಸ್ಥಾನಮಾನ ದೊರೆಯದಿದಲ್ಲಿ ಉಳಿದಿರುವುದು ಒಂದೇ ಅದು ಕಾಂಗ್ರೆಸ್" ಎಂದು ಕೆಆರ್ ಪೇಟೆ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದ್ದಾರೆ.
ಕೆ.ಆರ್ಪೇಟೆಯಲ್ಲಿ ಮಾತನಾಡಿದ ಅವರು, "ನಾರಾಯಣಗೌಡ ಅವರು ಮೊದಲು ಕಾಂಗ್ರೆಸ್ನತ್ತ ಬಂದಿದ್ದರು, ಆ ಸಂದರ್ಭದಲ್ಲಿ ನಾನು ಜಾಗ ಕೊಡದೆ ಓಡಿಸಿದೆ. ಹಾಗಾಗಿ ಹೋಗಿ ಬಿಎಸ್ಪಿ ಪಕ್ಷಕ್ಕೆ ಸೇರಿದ್ದರು. ಅಲ್ಲಿ ಏನೂ ಪ್ರಯೋಜನವಿಲ್ಲ ಎಂದು ಜೆಡಿಎಸ್ಗೆ ಹೋದರು. ಜೆಡಿಎಸ್ ಏನು ಮಾಡಿದೆ ಎಂದು ಎಲ್ಲರಿಗೂ ತಿಳಿದಿದೆ. ಆ ಹಿನ್ನಲೆಯಲ್ಲಿ ಈಗ ಅವರು ಬಿಜೆಪಿಗೆ ಹೋಗಿದ್ದಾರೆ. ಬಿಜೆಪಿ ಕೂಡಾ ಸ್ಥಾನಮಾನ ನೀಡದಿದ್ದಲ್ಲಿ ಉಳಿದಿರುವುದು ಕಾಂಗ್ರೆಸ್ ಮಾತ್ರ" ಎಂದರು.
"ಅವರು ಕಾಂಗ್ರೆಸ್ಗೆ ಬಂದರೆ ಆಟ ಇದೆ, ನಮಗೂ ಅವರಿಗೂ ಆಟ ಆರಂಭವಾಗುತ್ತದೆ. ಯಾವ ರೀತಿಯ ಆಟ ಎಂದು ನೀವು ಪರದೆಯ ಮೇಲೆ ನೋಡಿ" ಎಂದು ಹೇಳಿದರು.
"ಬಿಜೆಪಿ ಕೇಂದ್ರ ಮತ್ತು ರಾಜ್ಯದ ಕೆಲವು ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಶಕ್ತಿ ಕುಂದಿಸುವ ಯತ್ನ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯಡಿಯೂರಪ್ಪನವರು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಅವರ ಹೆಸರು ನಿರ್ನಾಮವಾಗುತ್ತದೆ" ಎಂದರು.