ಮಹಾರಾಷ್ಟ್ರ ಜ 30(Daijiworld News/MSP): ತನ್ನ ಅಂಗಡಿಯನ್ನು ಬಲವಂತವಾಗಿ ಮುಚ್ಚಿಸಲು ಬಂದ ಪ್ರತಿಭಟನಾಕಾರರ ಮೇಲೆ ಅಂಗಡಿ ಮಾಲಕಿ ಮೆಣಸಿ ಪುಡಿ ಎರಚಿರುವ ಘಟನೆ ಮಹಾರಾಷ್ಟ್ರದ ಯವತ್ಮಾಲ್ನಲ್ಲಿನಡೆದಿದೆ.ಈ ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಪೌರತ್ವ(ತಿದ್ದುಪಡಿ) ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ವಿರೋಧಿಸಿ ಹಲವು ಸಂಘಟನೆಗಳು ಬುಧವಾರ ಭಾರತ್ ಬಂದ್ ಕರೆ ನೀಡಿದ್ದವು. ಈ ವೇಳೆ ರಸ್ತೆಗಿಳಿದಿದ್ದ ಪ್ರತಿಭಟನಾಕಾರರು ಅಂಗಡಿಗಳನ್ನು ಮುಚ್ಚಿಸುತ್ತಾ ಬಂದಿದ್ದಾರೆ. ಈ ಸಂದರ್ಭ ಮಹಿಳೆ ಇದ್ದಂತ ಅಂಗಡಿಗೆ ಬಂದ ಪ್ರತಿಭಟನಾಕಾರರು ಅಂಗಡಿ ಮುಚ್ಚುವಂತೆ ಹೇಳಿದ್ದಾರೆ. ಆಗ ಮಾಲಕಿ ಮತ್ತು ಪ್ರತಿಭಟನಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಆದರೂ ಪ್ರತಿಭಟನಾಕಾರರು ಮಹಿಳೆಯ ಅಂಗಡಿಯ ಬಾಗಿಲನ್ನು ಬಲವಂತವಾಗಿ ಮುಚ್ಚಲು ಯತ್ನಿಸಿದಾಗ ಕುಪಿತಗೊಂಡ ಮಹಿಳೆ ಮೆಣಸಿನ ಪುಡಿಯನ್ನು ತಂದು ಪ್ರತಿಭಟನಾಕಾರರಿಗೆ ಎರಚಿದ್ದಾರೆ. ಇದರಿಂದ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.