ಚಂಡೀಗಢ, ಜ 30 (Daijiworld News/MB) : ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಾಬಾ ಲಕ್ಷಾನಂದ್ ಸ್ವಾಮಿ ಅವರ ಮೇಲೆ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಬಾ ಪಂಚಕುಲ ಜಿಲ್ಲೆಯ ಚೋಟಾ ತ್ರಿಲೋಕ್ಪುರದಲ್ಲಿ ಆಶ್ರಮ ನಡೆಸುತ್ತಿದ್ದು 14 ಮತ್ತು 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ಸೇವೆ ಮಾಡುವ ಉದ್ದೇಶದಿಂದ ಈ ಇಬ್ಬರು ಬಾಲಕಿಯರು ಆಶ್ರಮಕ್ಕೆ ಹೋಗಿದ್ದು ಈ ಸಂದರ್ಭದಲ್ಲಿ ಅವರಿಬ್ಬರನ್ನು ಬಾಬಾ ಬಂಧನ ಮಾಡಿದ್ದು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಲಾಗಿದೆ.
ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯವರಾದ ಅಪ್ರಾಪ್ತ ಬಾಲಕಿಯರು ಈ ಕುರಿತು ತನ್ನ ತಾಯಿಗೆ ಹೇಳಿದ್ದು ಈ ಕುರಿತು ದೂರು ನೀಡಿದ್ದಾರೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ನೇಹಾ ಚೌಹಾನ್ ತಿಳಿಸಿದ್ದಾರೆ.
ಆರೋಪಿ ಬಾಬಾ ಸ್ವಾಮಿ ಲಕ್ಷಾನಂದ್ ವಿರುದ್ಧ ಪೊಲೀಸರು ದೂರು ದಾಖಲು ಮಾಡಿದ್ದು ಆರೋಪಿಮ ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇಬ್ಬರು ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೈದ್ಯಕೀಯ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪಿಯನ್ನು ಶೀಘ್ರವೇ ಬಂಧನ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.