ಕೇರಳ, ಜ 30 (Daijiworld News/MB) : ಕೊರೋನಾ ವೈರಸ್ ತನ್ನ ಕರಾಳ ಹಸ್ತವನ್ನು ಭಾರತಕ್ಕೂ ಚಾಚಿದ್ದು ಮೊದಲ ಪ್ರಕರಣ ಕೇರಳದಲ್ಲಿ ವರದಿಯಾಗಿದೆ ಎಂದು ಕೇರಳ ಸರ್ಕಾರ ಗುರುವಾರ ತಿಳಿಸಿದೆ.
ಕೊರೋನಾ ವೈರಸ್ ಸೋಂಕಿತ ವಿದ್ಯಾರ್ಥಿನಿಯು, ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಅಲ್ಲಿಂದ ಭಾರತಕ್ಕೆ ವಾಪಾಸ್ ಆಗಿದ್ದಳು.
ವುಹಾನ್ ಪ್ರಾಂತ್ಯದಿಂದ ಭಾರತಕ್ಕೆ ಬಂದ ತ್ರಿಶೂರ್, ತಿರುವನಂತಪುರಂ, ಪತ್ತಣಂತಿಟ್ಟ,ಮಲಪ್ಪುರಂನ ತಲಾ ಒಬ್ಬರನ್ನು ಹಾಗೂ ಎರ್ನಾಕುಲಂ ಜಿಲ್ಲೆಯಲ್ಲಿ ಮೂವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಈ ಕುರಿತು ಕೇರಳದ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಅವರು ತುರ್ತು ಸಭೆಯನ್ನು ಕರೆದಿದ್ದಾರೆ ಎಂದು ವರದಿ ತಿಳಿಸಿದೆ.
ದೆಹಲಿಯಲ್ಲಿ 3, ಪಂಜಾಬ್ನಲ್ಲಿ 16, ಹರಿಯಾಣದಲ್ಲಿ 2, ಬಿಹಾರ್ನಲ್ಲಿ 1, ಮಹಾರಾಷ್ಟ್ರದಲ್ಲಿ 6, ರಾಜಸ್ಥಾನದಲ್ಲಿ 1 ಹಾಗೂ ಕರ್ನಾಟದಲ್ಲಿ 4 ಕೊರೊನಾ ವೈರಸ್ ಸೋಂಕು ತಗುಲಿರುವ ಶಂಕಿತ ಪ್ರಕರಣಗಳು ವರದಿಯಾಗಿದೆ. ಕೇರಳದಲ್ಲಿ 10 ಆಸ್ಪತ್ರೆಗಳಲ್ಲಿ ಸುಮಾರು 800 ಜನರನ್ನು ನಿಗಾದಲ್ಲಿ ಇರಿಸಲಾಗಿದೆ. ಭಾರತದಲ್ಲಿ ಒಟ್ಟು 670 ಶಂಕಿತ ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ.
ಚೀನಾದಲ್ಲಿ ಕೊರೋನಾ ವೈರಸ್ನಿಂದಾಗಿ ಈವರೆಗೆ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.