ಚಿಕ್ಕಮಗಳೂರು, ಜ.31 (Daijiworld News/PY): "ಸಿ.ಟಿ ರವಿ ಯಾವತ್ತು ಸತ್ಯ ಹೇಳಿ ಗೊತ್ತಿಲ್ಲ. ಸುಳ್ಳು ಮೈಗೂಡಿಸಿಕೊಂಡಿದ್ದಾರೆ. ಸಿ.ಟಿ ರವಿ ಅವರ ಅಭಿವೃದ್ಧಿಯಾಗಿದೆ ಹೊರತು ಜನರ ಅಭಿವೃದ್ಧಿಯಾಗಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಖಾಸಗಿ ಹೋಟೇಲ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, "ನಾವು ನಮ್ಮ ಅಭಿಪ್ರಾಯವನ್ನು ರಾಜ್ಯಪಾಲರ ಭಾಷಣದ ಪ್ರತಿ ನೋಡಿದ ಮೇಲೆ ತಿಳಿಸಲೇ ಬೇಕಾಗುತ್ತದೆ. ಶಾಸಕರ ಹಕ್ಕನ್ನು ನಾವು ರಾಜ್ಯದ ಜನತೆಯ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ರಾಜ್ಯಪಾಲರ ಭಾಷಣದಲ್ಲಿ ಆಕ್ಷೇಪಾರ್ಹ ವಿಷಯಗಳಿದ್ದರೆ ನಂತರದ ಮಾತು. ಪ್ರತಿಭಟಿಸುವ ಶಾಸಕರನ್ನು ಅಮಾನತಿನಲ್ಲಿ ಇಡುತ್ತೇವೆ ಎನ್ನುವುದು ಅಸಂವಿಧಾನಿಕ. ವಿನಾ ಕಾರಣ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಆಕ್ಷೇಪಾರ್ಹವಿದ್ದರೆ ಪ್ರತಿಭಟಿಸಬೇಕಾಗುತ್ತದೆ" ಎಂದರು.
ಅಭಿವೃದ್ದಿ ವಿಚಾರವಾಗಿ ಸಿಟಿ ರವಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ಯಾವತ್ತು ಸಿ ಟಿ ರವಿ ಅವರಿಗೆ ಸತ್ಯ ಹೇಳಿ ಗೊತ್ತಿಲ್ಲ. ಸುಳ್ಳನ್ನು ಮೈಗೂಡಿಸಿಕೊಂಡಿದ್ದಾರೆ. ಸಿ.ಟಿ ರವಿ ಅವರ ಅಭಿವೃದ್ಧಿಯಾಗಿದೆ ಹೊರತು ಜನರ ಅಭಿವೃದ್ಧಿಯಾಗಿಲ್ಲ" ಎಂದು ತಿಳಿಸಿದರು.
"ಕಳೆದ ಬಾರಿ ಬಜೆಟ್ ನಲ್ಲಿ 27 ಲಕ್ಷ ಕೋಟಿ ಖರ್ಚು ಮಾಡುತ್ತೇನೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಏನು ಮಾಡಿದೆ ಎಂದು ತಿಳಿಯುತ್ತದೆ. ಸ್ವರ್ಗ ಸೃಷ್ಟಿ ಮಾಡುತ್ತೇನೆ ಅಂದಿದ್ದರು. ಅದರೆ ಈಗ ನರಕವಾಗಿದೆ. ಅವರ ಪ್ರಕಾರ ಜಿಡಿಪಿ 4.5%, ನನ್ನ ಪ್ರಕಾರ 2.5%. ಜಿಡಿಪಿ ಇಳಿದಿದೆ. 10 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದಿದ್ದರು ಆದರೆ, ಈಗ ಲಕ್ಷಾಂತರ ಉದ್ಯೋಗ ಕಡಿತಗೊಂಡಿದೆ. ದೇಶದ ಅರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ವಿಚಾರವನ್ನು ಮುಚ್ಚಿ ಹಾಕುವ ಸಲುವಾಗಿ ಸಿಎಎ, ಎನ್ಆರ್ಸಿ ಮೂಲಕ ಬೇರೆಡೆಗೆ ಸೆಳೆಯಲು ನಾಟಕವಾಡುತ್ತಿದ್ದಾರೆ" ಎಂದು ಹೇಳಿದರು.
ದೆಹಲಿಯಲ್ಲಿ ಜ.30 ಗುರುವಾರ ಗುಂಡು ಹಾರಿಸಿದ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, "ಗಾಂಧೀಜಿ ಹಿಂದೂ ವಿರೋಧಿಯಾಗಿರಲ್ಲ. ಆರ್ಎಸ್ಎಸ್ ಹಾಗೂ ಹಿಂದೂ ಮಹಾಸಭಾದವರು ಮಹಾತ್ಮ ಗಾಂಧಿಯನ್ನು ಕೊಂದಿದ್ದು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಕುಮ್ಮಕ್ಕಿನಿಂದ ಗುಂಡು ಹಾರಿಸಿರುವುದು . ಪೊಲೀಸರು ಮೂಖಪ್ರೇಕ್ಷಕರಂತಿದ್ದರೂ ಎಂದರೆ ಏನಾಗಿದೆ ದೇಶದ ಪರಿಸ್ಥಿತಿ ಎಂಬುದು ತಿಳಿಯುತ್ತಿದೆ" ಎಂದರು.