ನವದೆಹಲಿ, ಜ.31 (Daijiworld News/PY) : ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಪೈಕಿ ಒಬ್ಬನಾದ ಪವನ್ ಗುಪ್ತಾ ಶುಕ್ರವಾರ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಘಟನೆ ನಡೆದಾಗ ನಾನು ಅಪ್ರಾಪ್ತನಾಗಿದ್ದೆ ಆದ ಕಾರಣ ನನ್ನನ್ನು ಮರಣದಂಡನೆಗೆ ಒಳಪಡಿಸದಂತೆ ಅಪರಾಧಿ ಪವನ್ ಗುಪ್ತಾ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದ್ದಾನೆ.
ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿತ್ತು. ಆದರೆ ಈಗ ಸಾಂವಿಧಾನಿಕ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಮುಖಾಂತರ ಮರಣದಂಡನೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾನೆ.
2012ರಲ್ಲಿ 6 ಮಂದಿ ಸೇರಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಸಂಬಂಧ ವಿಚಾರಣೆ ನಡೆಸುತ್ತಿದ್ದ ವೇಳೆಯೇ ಓರ್ವ ಸಾವನ್ನಪ್ಪಿದ್ದ. ಮತ್ತೊಬ್ಬ ಅಪ್ರಾಪ್ತನಾಗಿದ್ದ ಕಾರಣ ಬಿಡುಗಡೆ ಮಾಡಲಾಗಿತ್ತು. ಉಳಿದ 4 ಮಂದಿಗೆ ಮರಣ ದಂಡನೆ ವಿಧಿಸಲಾಗಿದೆ.