ನವದೆಹಲಿ, ಜ.31 (Daijiworld News/PY) : ಕೊರೊನಾ ವೈರಸ್ಗೆ ಒಳಗಾಗಿರುವ ಚೀನಾದ ಹುಬೇ ಪ್ರಾಂತ್ಯದ ವುಹಾನ್ ನಗರದಲ್ಲಿರುವ ಭಾರತೀಯರನ್ನು ಕರೆತರುವ ಸಲುವಾಗಿ ಸುಮಾರು 423 ಆಸನಗಳಿರುವ ಬಿ737 ಜಂಬೋ ಏರ್ ಇಂಡಿಯಾ ವಿಮಾನ ವುಹಾನ್ ನಗರಕ್ಕೆ ಹೊರಟಿದೆ.
ಚೀನಾದ ಹುಬೇ ಪ್ಯಾಂತ್ಯದಲ್ಲಿ ವಾಸಿಸುತ್ತಿರುವ ಸುಮಾರು 600 ಭಾರತೀಯರೊಂದಿಗೆ ಭಾರತ ಸರ್ಕಾರ ಜ.30 ಗುರುವಾರದಂದು ಸಂಪರ್ಕ ಸಾಧಿಸಿದ್ದು, ಆ ಭಾರತೀಯರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಏರ್ ಇಂಡಿಯಾ ವಿಮಾನ ಸಜ್ಜಾಗಿ ಹೊರಟಿದೆ.
ಅಗತ್ಯವಾದ ವೈದ್ಯಕೀಯ ತಪಾಸಣೆಯ ಬಳಕವೇ ವಿಮಾನಕ್ಕೆ ಹತ್ತಿಸಿಕೊಳ್ಳಲಾಗುತ್ತದೆ. ಮಾಸ್ಕ್, ಗ್ಲೌಸ್, ಅಗತ್ಯ ಔಷಧಿಗಳ ಜೊತೆಗೆ ವಿಮಾನದಲ್ಲಿ ಕೆಲ ವೈದ್ಯರನ್ನೂ ಕಳುಹಿಸಲಾಗಿದೆ ಎನ್ನಲಾಗಿದೆ.
ಶುಕ್ರವಾರ ಹೊರಟ ವಿಮಾನದಲ್ಲಿ ಸುಮಾರು 315 ಭಾರತೀಯರು ಮರಳುವ ಸಾಧ್ಯತೆಯಿದೆ. ಮೊದಲ ಹಂತದ ಬಳಿಕ ಪುನಃ ವುಹಾನ್ಗೆ ಹಾರಲಿರುವ ಏರ್ ಇಂಡಿಯಾದ ಜಂಬೋ ಉಳಿದವರನ್ನು ಕರೆದುಕೊಂಡು ಬರಲಿದೆ ಎನ್ನಲಾಗಿದೆ.