ಬೆಂಗಳೂರು, ಫೆ. 01 (Daijiworld News/MB) : ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪಶು ಆಹಾರದ ಮಾರಾಟ ದರ ಇಳಿಕೆ ಮಾಡಿದ್ದು ಫೆಬ್ರವರಿ 1 ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕೆಎಂಎಫ್ ಶುಕ್ರವಾರ ಹಾಲು ಮತ್ತು ಮೊಸರು ಮಾರಾಟ ದರವನ್ನು ಲೀಟರ್ಗೆ 2 ರೂಪಾಯಿಯಿಂತೆ ಹೆಚ್ಚಳ ಮಾಡಿತ್ತು.
"ಹಾಲು ಉತ್ಪಾದನೆಗೆ ರೈತರಿಗೆ ತಗಲುತ್ತಿರುವ ವೆಚ್ಚ ಕಡಿಮೆ ಮಾಡಲು ಮತ್ತು ಹಾಲು ಉತ್ಪಾದನೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಪಶು ಆಹಾರದ ದರವನ್ನು ಶಾಶ್ವತವಾಗಿ ಟನ್ಗೆ ₹500 ಕಡಿಮೆ ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪ್ರತಿ ಟನ್ಗೆ ₹500 ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ" ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.