ನವದೆಹಲಿ, ಫೆ. 01 (Daijiworld News/MB) : ಕೊರೋನಾ ವೈರಸ್ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ನೆಲೆಸಿದ್ದ 324 ಭಾರತೀಯರನ್ನು ನವದೆಹಲಿಗೆ ಕರೆತರಲಾಗಿದೆ.
ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಏರ್ ಇಂಡಿಯಾ ಪ್ಯಾರಾಮೆಡಿಕಲ್ನ ಐವರು ವೈದ್ಯರು ಸೇರಿದಂತೆ ಒಟ್ಟು 324 ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ.
ಚೀನಾದಿಂದ ಕರೆತಂದಿರುವ ಭಾರತೀಯರನ್ನು 14 ದಿನಗಳ ಕಾಲ ನವದೆಹಲಿ ಹಾಗೂ ಮನೇಸರ್ನ ಪ್ರತ್ಯೇಕ ಕೇಂದ್ರಗಳಲ್ಲಿ ಇರಿಸಿ ಅವರಲ್ಲಿ ಕೊರೋನಾ ವೈರಸ್ ಸೋಂಕಿತ ಯಾವುದೇ ಲಕ್ಷಣಗಳು ಕಂಡುಬರದಿದ್ದಲ್ಲಿ ಮಾತ್ರ ಅಲ್ಲಿಂದ ಅವರನ್ನು ಅವರ ಮನೆಗಳಿಗೆ ಕಳುಹಿಸಲಾಗುವುದು.
ಹಾಗೆಯೇ ಚೀನಾಕ್ಕೆ ತೆರಳಿರುವ ಪೈಲಟ್ಗಳು, ಎಂಜಿನಿಯರ್ಗಳು, ಸಹಾಯಕರು, ಏರ್ ಇಂಡಿಯಾ ಸಿಬ್ಬಂದಿ ಮತ್ತು ವೈದ್ಯರು ಭಾರತಕ್ಕೆ ಹಿಂದಿರುಗಿದ ಬಳಿಕ ಅವರನ್ನು ಕೂಡಾ ಒಂದು ವಾರ ಕಾಲ ಪ್ರತ್ಯೇಕವಾಗಿ ಇರಿಸಲಾಗುವುದು.
ಈಗಾಗಲೇ ಚೀನಾದಲ್ಲಿ ಪತ್ತೆಯಾದ ಈ ಕೊರೋನಾ ವೈರಸ್ ಬೇರೆ ಬೇರೆ ದೇಶದಲ್ಲಿ ಪತ್ತೆಯಾಗುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದೆ.
ಭಾರತದಲ್ಲೂ ಕೊರೋನಾ ವೈರಸ್ ಸೋಂಕು ಕಾಲಿಟ್ಟಿದ್ದು ಕೇರಳದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದೆ.