ನವದೆಹಲಿ, ಫೆ. 01 (Daijiworld News/MB) : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಬೆಳಿಗ್ಗೆ 11 ಗಂಟೆಗೆ 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ.
ಇಂದು ಬೆಳಿಗ್ಗೆ ರಾಷ್ಟ್ರಪತಿ ಭವನಕ್ಕೆ ಬೇಟಿ ನೀಡಿದ ಅವರು, ಕೇಂದ್ರ ಬಜೆಟ್ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ರಿಂದ ಅನುಮೋದನೆ ಪಡೆದರು.
ದೇಶದ ಮೊದಲ ಮಹಿಳಾ ವಿತ್ತ ಸಚಿವರಾದ ಕಳೆದ ವರ್ಷ ಕೆಂಪುವಸ್ತ್ರದಲ್ಲಿ ಸುತ್ತಿದ ಬಜೆಟ್ ದಾಖಲೆ ಪುಸ್ತಕವನ್ನು ಹೊತ್ತು ಸಂಸತ್ತಿಗೆ ಬಂದಿದ್ದ ನಿರ್ಮಲಾ ಅವರು ಈ ಭಾರಿಯೂ ಕೆಂಪುವಸ್ತ್ರದಲ್ಲಿ ಸುತ್ತಿದ ದಾಖಲೆಯನ್ನು ಹಿಡಿದು ಹಣಕಾಸು ಸಚಿವಾಲಯದಿಂದ ಸಂಸತ್ ಭವನಕ್ಕೆ ಹೊರಟಿದ್ದಾರೆ.
ಬಜೆಟ್ ಮಂಡನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಕೇಂದ್ರ ಸಚಿವ ಸಂಪುಟ ಸಭೆ ಮುಕ್ತಾಯವಾಗಿದೆ.