ನವದೆಹಲಿ, ಫೆ. 01 (Daijiworld News/MB) : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರು ಶನಿವಾರ ಸಂಸತ್ತಿನಲ್ಲಿ ಮಂಡನೆ ಮಾಡುತ್ತಿರುವ ಬಜೆಟ್ನಲ್ಲಿ ಕೃಷಿ, ಗ್ರಾಮೀಣ ಜೀವನ ಅಭಿವೃದ್ಧಿಗೆ 16 ಅಂಶಗಳ ಯೋಜನೆ ಪ್ರಕಟ ಮಾಡಿದ್ದಾರೆ.
ನೀರಾವರಿ ಯೋಜನೆಗಳಿಗೆ ನೂರು ಜಿಲ್ಲೆಗಳೂ ಆಯ್ಕೆ ಮಾಡಲಾಗಿದ್ದು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಸರ್ಕಾರ ಕ್ರಮಕೈಗೊಳ್ಳಲಿದೆ.
ಹಾಗೆಯೇ ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆಗೆ ಯೋಜನೆಯಲ್ಲಿ 20 ಲಕ್ಷ ರೈತರಿಗೆ ಪಂಪ್ಸೆಟ್ ವಿತರಣೆ ಮಾಡಲಾಗುತ್ತದೆ.
ಹಾಗೆಯೇ ಕುಸುಮ್ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ. ಹೈನುಗಾರಿಕೆಗೂ ನರೇಗಾ ವಿಸ್ತರಣೆ ಮಾಡಲಾಗುವುದು. ಮೀನುಗಾರಿಕೆಗಾಗಿ ಸಾಗರ ಮಿತ್ರ ಯೋಜನೆ ಜಾರಿ ಮಾಡಿದ್ದು ಕೃಷಿ ಕ್ಷೇತ್ರಕ್ಕೆ 2.83 ಲಕ್ಷ ಕೋಟಿ ಮೀಸಲು ಇಡಲಾಗಿದೆ.
2020ರಲ್ಲಿ ರೈತರ ಆದಾಯ ದ್ವಿಗುಣಗೊಳಿಸಲು, ಆರ್ಥಿಕತೆಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ರಾಷ್ಟ್ರವಾಗಿದ್ದು ರೈತರ ಉತ್ಪನ್ನಗಳನ್ನು ಸಾಗಿಸಲು ಕಿಸಾನ್ ರೈಲು ಘೋಷಣೆ ಮಾಡಿದ್ದಾರೆ.