ನವದೆಹಲಿ, ಫೆ.01 (Daijiworld News/PY) : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2020-2021ರ ಬಜೆಟ್ ಭಾಷಣವನ್ನು ಮುಗಿಸುತ್ತಿದ್ದಂತೆಯೇ, "ಕೇಂದ್ರ ಬಜೆಟ್ ಮಂಡನೆಯು ಇತಿಹಾಸದಲ್ಲೇ ದೀರ್ಘಾವಧಿಯ ಮಂಡನೆ ಆಗಿರಬಹುದು ಆದರೆ ಇದು ಟೊಳ್ಳು" ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ ಕೇಂದ್ರ ಬಜೆಟ್ 2020-2021ರ ಬಜೆಟ್ ಭಾಷಣ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೆಂದ್ರ ಬಜೆಟ್ ಮಂಡನೆಯು ಇತಿಹಾಸದಲ್ಲೇ ದೀರ್ಘಾವಧಿಯ ಮಂಡನೆ ಆಗಿರಬಹುದು ಆದರೆ ಇದು ಟೊಳ್ಳು" ಎಂದು ಹೇಳಿದರು.
"ಮುಖ್ಯವಾಗಿ ದೇಶದಲ್ಲಿ ನಿರುದ್ಯೋಗದ ಸಮಸ್ಯೆಯಿದೆ, ಆದರೆ ಯುವ ಜನರಿಗೆ ಉದ್ಯೋಗ ದೊರಕಿಸಿ ಕೊಡುವಂತಹ ಯಾವುದೇ ಯೋಜನೆಗಳನ್ನು ನಾನು ಕಂಡಿಲ್ಲ. ಇದರಿಂದ ಕೇಂದ್ರ ಸರ್ಕಾರದ ಏನೆಂದು ತಿಳಿಯುತ್ತಿದೆ" ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಎನ್ಡಿಎ-2 ಸರ್ಕಾರದ ಕೇಂದ್ರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದು, ಇದು ಅವರ 2ನೇ ಬಜೆಟ್ ಮಂಡನೆಯಾಗಿದೆ.
2020–21ನೇ ಸಾಲಿನ ಬಜೆಟ್ ಮಂಡನೆ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶದ ಬಜೆಟ್ ಇತಿಹಾಸದಲ್ಲೇ ದೀರ್ಘಾವಧಿಯ ಭಾಷಣ ಮಾಡಿದ್ದಾರೆ.