ಲಖನೌ, ಫೆ 02 (Daijiworld News/MB) : ನಗರದ ಹಜರತ್ಗಂಜ್ ಪ್ರದೇಶದಲ್ಲಿ ಭಾನುವಾರ ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ರಂಜೀತ್ ಬಚ್ಚನ್ ಅವರನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಗೋರಖ್ಪುರ ಜಿಲ್ಲೆಯ ನಿವಾಸಿ ರಂಜೀತ್ ಬಚ್ಚನ್ ಸಹಚರನೊಂದಿಗೆ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಡಿಆರ್ಐ) ಕಟ್ಟಡದ ಬಳಿ ಅಪರಿಚಿತರು ಗುಂಡಿಕ್ಕಿ ಪರಾರಿಯಾಗಿದ್ದಾರೆ
ಬಚ್ಚನ್ ತಲೆಗೆ ದುಷ್ಕರ್ಮಿಗಳು ಗುಂಡಿಕ್ಕಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿ ಬಳಿಕ ಆರೋಪಿಗಳು ಬಚ್ಚನ್ ಬಳಿ ಇದ್ದ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ರಂಜಿತ್ ಜೊತೆಯಿದ್ದ ಇನ್ನೋರ್ವ ವ್ಯಕ್ತಿ ಆಪಾಯದಿಂದ ಪಾರಾಗಿದ್ದಾನೆ ಎಂದು ತನಿಖಾ ತಂಡದ ಪೊಲೀಸರು ತಿಳಿಸಿದ್ದಾರೆ.
ವಿಧಿವಿಜ್ಞಾನ ತಜ್ಞರು ಘಟನೆ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು ಪ್ರಕರಣದ ತನಿಖೆ ಮತ್ತು ಆರೋಪಿಗಳ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿದು ಬಂದಿದೆ.
ಲಖೌನೌದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಬಲಪಂಥೀಯ ನಾಯಕನ ಎರಡನೇ ಹತ್ಯೆ ಇದಾಗಿದ್ದು ಕಳೆದ ಅಕ್ಟೋಬರ್ನಲ್ಲಿ ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಮಲೇಶ್ ತಿವಾರಿ ಅವರನ್ನು ಹತ್ಯೆ ಮಾಡಲಾಗಿತ್ತು.