ಮಹಾರಾಷ್ಟ್ರ, ಫೆ 02 (Daijiworld News/MB) : ನಮ್ಮ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಎನ್ಆರ್ಸಿ (ರಾಷ್ಟ್ರೀಯ ಪೌರತ್ವ ನೋಂದಣಿ) ಕಾಯ್ದೆಯನ್ನು ಜಾರಿ ಮಾಡಲಾಗುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆ ತಿಳಿಸಿದ್ದಾರೆ.
ಈ ಹೇಳಿಕೆ ನೀಡುವುದರ ಮೂಲಕ ಮಹಾರಾಷ್ಟ್ರ ಕೂಡ ಸಿಎಎ, ಎನ್ ಆರ್ ಸಿ ಮತ್ತು ಎನ್ ಪಿ ಆರ್ ಅನ್ನು ಜಾರಿಗೊಳಿಸದಿರಲು ನಿರ್ಧರಿಸಿದ ರಾಜ್ಯಗಳ ಪಟ್ಟಿಗೆ ಸೇರ್ಪಡೆಗೊಂಡಿದೆ.
ಎನ್ಆರ್ಸಿ, ಮತ್ತು ಎನ್ಪಿಆರ್ಗೆ ದೇಶದಾದ್ಯಂತ ವಿರೋಧ ವ್ಯಕ್ತವಾಗಿದ್ದು ಹಲವೆಡೆ ನಡೆದ ಪ್ರತಿಭಟನೆಗಳೂ ಹಿಂಸಾತ್ಮಾಕ ರೂಪ ತಳೆದಿತ್ತು. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಅನುಷ್ಠಾನಕ್ಕೆ ತರಲು ವಿರೋಧ ವ್ಯಕ್ತವಾಗಿತ್ತು.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜನವರಿ 24 ರಂದು ಸುಪ್ರಿಂಕೋರ್ಟ್ನಲ್ಲಿ, ತಿದ್ದುಪಡಿ ಮಾಡಿದ ಕಾನೂನು ಭಾರತೀಯ ಸಂವಿಧಾನವು ನೀಡಿದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಎಂದಿದ್ದರು.
ಆದರೆ ಅವರು ಈ ಕಾಯ್ದೆ ಯಾವುದೇ ಭಾರತೀಯನ ಪೌರತ್ವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಹೇಳಿದ್ದರು.