ನವದೆಹಲಿ, ಫೆ.02 (Daijiworld News/PY) : "ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾವು ಎಲ್ಲ ಉಗ್ರಗಾಮಿಗಳನ್ನು ಗುರುತಿಸಿ, ಬಿರಿಯಾನಿ ಕೊಡುವ ಬದಲಿಗೆ ಗುಂಡು ಹೊಡೆಯುತ್ತಿದ್ದೇವೆ" ಎಂದು ಉತ್ತರ ಪ್ರದೇಶ ಮುಖ್ಯ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಫೆ.1 ಶನಿವಾರದಂದು ದೆಹಲಿ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣ ಮಾಡಿದ ಅವರು, "ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶಾಹೀನ್ ಬಾಗ್ನ ಪ್ರತಿಭಟನಾಕಾರರಿಗೆ ಬಿರಿಯಾನಿ ಪೂರೈಸುತ್ತಿದ್ದಾರೆ. ದೆಹಲಿಯ ಶಾಹೀನ್ ಬಾಗ್ ಪೌರತ್ವ ಕಾಯ್ದೆ ವಿರೋಧಿ ಹೋರಾಟಗಳ ಕುದಿಬಿಂದು ಎನಿಸಿರುವುದನ್ನು ಇಲ್ಲಿ ಸ್ಮರಿಸಬಹುದು" ಎಂದು ತಿಳಿಸಿದರು.
"ಅರವಿಂದ್ ಕೇಜ್ರಿವಾಲ್ ಅವರಿಗೆ ದೆಹಲಿಯ ಜನರಿಗೆ ಸರಿಯಾಗಿ ಕುಡಿಯುವ ನೀರು ಕೊಡಲು ಸಾಧ್ಯವಾಗಲಿಲ್ಲ. ದೆಹಲಿ ಸರ್ಕಾರ ಪೂರೈಸುತ್ತಿರುವ ನೀರಿನಲ್ಲಿ ವಿಷದ ಅಂಶವಿದೆ ಎಂದು ಬಿಐಎಸ್ ಸಮೀಕ್ಷೆ ಹೇಳುತ್ತದೆ. ಆದರೆ ಈ ವ್ಯಕ್ತಿ ಶಾಹೀನ್ ಬಾಗ್ ಹಾಗೂ ನಗರದ ಇತರೆಡೆ ಪ್ರತಿಭಟಿಸುತ್ತಿರುವವರಿಗೆ ಬಿರಿಯಾನಿ ನೀಡುತ್ತಿದ್ದಾರೆ" ಎಂದು ಹೇಳಿದರು.
"ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ನಾವು ಎಲ್ಲ ಉಗ್ರಗಾಮಿಗಳನ್ನು ಗುರುತಿಸಿ, ಬಿರಿಯಾನಿ ಕೊಡುವ ಬದಲಿಗೆ ಗುಂಡು ಹೊಡೆಯುತ್ತಿದ್ದೇವೆ. ಪಾಕಿಸ್ತಾನಿ ಭಯೋತ್ಪಾದಕರನ್ನು ನಮ್ಮಯೋಧರು ನರಕಕ್ಕೆ ಕಳುಹಿಸುತ್ತಿದ್ದಾರೆ. ಈ ಹಿಂದೆ ಪಾಕಿಸ್ತಾನದಿಂದ ದುಡ್ಡು ಪಡೆದವರು ಕಾಶ್ಮೀರದಲ್ಲಿ ಕಲ್ಲುತೂರಾಟ ನಡೆಸುತ್ತಿದ್ದರು. ಕೇಜ್ರಿವಾಲ್ ಪಕ್ಷ ಹಾಗೂ ಕಾಂಗ್ರೆಸ್ ಅಂಥವರಿಗೆ ಬೆಂಬಲ ನೀಡುತ್ತಿತ್ತು. ಆದರೆ ಈಗ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಈ ಪ್ರವೃತ್ತಿ ನಿಂತಿದೆ" ಎಂದರು.
"ದೆಹಲಿ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನೂ ಕೇಜ್ರಿವಾಲ್ ಪ್ರತಿಭಟನಾಕಾರರಿಗೆ ಬಿರಿಯಾನಿ ಕೊಡಲು ಬಳಸುತ್ತಾರೆ. ದೆಹಲಿಯಲ್ಲಿ ಮೆಟ್ರೊ ಅಭಿವೃದ್ಧಿ, ಸ್ವಚ್ಛ ಕುಡಿಯುವ ನೀರು ಹಾಗೂ ವಿದ್ಯುತ್ ಸರಬರಾಜಿನತ್ತ ಕೇಜ್ರಿವಾಲ್ ಅವರು ಗಮನಹರಿಸುತ್ತಿಲ್ಲ. ಅವರಿಗೆ ಶಾಹೀನ್ ಬಾಗ್ ಮಾತ್ರ ಮುಖ್ಯ" ಎಂದು ಹೇಳಿದರು.