ನವದೆಹಲಿ, ಫೆ.03 (Daijiworld News/PY) : ಕೊರೋನಾ ವೈರಸ್ನಿಂದ ಚೀನಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 360ಕ್ಕೇರಿದ್ದು, 2829 ಜನರಲ್ಲಿ ಕೊರೋನಾ ವೈರಸ್ ಇರುವುದು ಖಚಿತವಾಗಿದೆ ಎಂದು ವರದಿಯಾಗಿದೆ.
ಕೊರೋನಾ ವೈರಸ್ ಭಾರತದಲ್ಲಿ ಹರಡದಂತೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಫೆ.2 ಭಾನುವಾರದಂದು ಭಾರತದ ಎರಡನೇ ಕೊರೋನಾ ವೈರಸ್ ಪತ್ತೆಯಾಗಿದ್ದು, ಈ ಎರಡೂ ಪ್ರಕರಣಗಳು ಕೇರಳದಲ್ಲಿಯೇ ಪತ್ತೆಯಾಗಿದೆ.
ಭಾರತಕ್ಕೆ ಆಗಮಿಸುವ ಚೀನಾ ಪ್ರಜೆಗಳು ಹಾಗೂ ಚೀನಾದಲ್ಲಿರುವ ವಿದೇಶಿಯರಿಗೆ ನೀಡಲಾಗುತ್ತಿದ್ದ ಇ–ವೀಸಾ ಸೌಲಭ್ಯವನ್ನು ಭಾನುವಾರದಿಂದ ಅನ್ವಯವಾಗುವಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಫೆ.2 ಭಾನುವಾರವೂ ವುಹಾನ್ನಿಂದ 323 ಭಾರತೀಯರನ್ನು ಏರ್ಇಂಡಿಯಾ ವಿಮಾನದ ಮೂಲಕ ಸ್ವದೇಶಕ್ಕೆ ವಾಪಾಸಾಗಿದ್ದು, ಇವರ ಜೊತೆ ಮಾಲ್ಡೀವ್ಸ್ನ 7 ನಾಗರೀಕರನ್ನೂ ಸುರಕ್ಷಿತವಾಗಿ ಕರೆತರಲಾಗಿದೆ. ಇವರೆಲ್ಲರನ್ನೂ ಸೇನೆ ನಿರ್ಮಿಸಿರುವ ನಿಗಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ 2 ದಿನಗಳ ಕಾಲ ಇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭ ಮಾಲ್ಡೀವ್ಸ್ನ 7 ಮಂದಿಯನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತಂದು ಮಾನವೀಯತೆ ತೋರಿದ್ದಕ್ಕೆ ಭಾರತ ಸರಕಾರಕ್ಕೆ ಮಾಲ್ಡೀವ್ಸ್ ಸರಕಾರ ಟ್ವೀಟ್ ಮುಖಾಂತರ ಧನ್ಯವಾದ ತಿಳಿಸಿದೆ.