ಮಹಾರಾಷ್ಟ್ರ, ಫೆ 3 (Daijiworld News/MSP): "ಭಾರತೀಯ ಮೂಲನಿವಾಸಿಗಳನ್ನು ಗುರುತಿಸುವುದು ಅತ್ಯಂತ ಮುಖ್ಯ ಎಂದಾದರೆ ಭಾರತೀಯರೆಲ್ಲಾ ಪ್ರಜೆಗಳ ಮೇಲೆ ಡಿಎನ್ಎ ಪರೀಕ್ಷೆ ನಡೆಸಿ" ಎಂದು ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಮೋದಿ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
"ನಾಗರಿಕರ ಮೂಲದ ಬಗೆಗೆ ಸರ್ಕಾರ ನಿಜಕ್ಕೂ ಚಿಂತೆಯಿದ್ದರೆ ಭಾರತೀಯರೆಲ್ಲಾರ ಡಿಎನ್ಎ ಪರೀಕ್ಷೆಯನ್ನು ನಡೆಸಬೇಕು, ಯಾಕೆಂದರೆ ಈ ಹಿಂದೆ ಯುರೇಷಿಯಾದಿಂದ ಅನೇಕ ಮಂದಿ ವಲಸೆ ಬಂದು ಭಾರತದಲ್ಲಿ ನೆಲೆಸಿದವರಿದ್ದರೆ. ಭಾರತದಲ್ಲಿ ರಷ್ಯಾ ಮತ್ತು ಮದ್ಯ ಏಷ್ಯಾದಿಂದ ಆಗಮಿಸಿದ ಜನರಿದ್ದಾರೆ. ಅವರನ್ನು ಆರ್ಯನ್ನರು ಎನ್ನಲಾಗುತ್ತದೆ. ಆದ್ದರಿಂದ ಈ ಜನರನ್ನು ಅವರ ಸ್ಕ್ರೀನಿಂಗ್ ಮತ್ತು ಡಿಎನ್ಎ ಪರೀಕ್ಷೆಯ ನಂತರ ಯುರೇಷಿಯಾಕ್ಕೆ ಕಳುಹಿಸಬೇಕು" ಎಂದು ಸಚಿವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಎನ್ಆರ್ಸಿ-ಸಿಎಎ ಕಾನೂನು ಬಗ್ಗೆ ಕಿಡಿಕಾರಿದ ಅವರು, "ಭಾರತ ದೇಶದಲ್ಲಿ ಅನೇಕ ಬುಡಕಟ್ಟು ಜನಾಂಗ, ಜಿಪ್ಸಿಗಳಂತಹ ಹಲವಾರು ಸಮುದಾಯಗಳಿವೆ, ಅವರು ಜೀವನೋಪಾಯಕ್ಕಾಗಿ ಹುಡುಕಾಟ ನಡೆಸುತ್ತಿರುವ ಜನಾಂಗವಾಗಿದೆ. ಇವರಲ್ಲಿ ಆಧಾರ್, ಪ್ಯಾನ್ ಕೇಳಿದರೆ ತಮ್ಮ ಪೌರತ್ವವನ್ನು ಹೇಗೆ ಸಾಬೀತುಪಡಿಸುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
"ಈ ಕಾಯ್ದೆಯನ್ನು ನಾವು ವಿರೋಧಿಸುತ್ತಿದ್ದು, ತಕ್ಷಣ ಇದನ್ನು ವಾಪಾಸ್ ಪಡೆದುಕೊಳ್ಳಲ್ಲಿ, ಸರ್ಕಾರದ ದಬ್ಬಾಳಿಕೆ ಮತ್ತು ಸರ್ವಾಧಿಕಾರದ ಅಳ್ವಿಕೆಯನ್ನು ನಾವು ವಿರೋಧಿಸುತ್ತೇವೆ" ಎಂದು ಜಿತೇಂದ್ರ ಅವ್ಹಾದ್ ಹೇಳಿದ್ದಾರೆ.