ಲಕ್ನೋ, ಫೆ 3 (Daijiworld News/MSP): ಲಕ್ನೋದ ಹಜರತ್ಗಂಜ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ವಿಶ್ವ ಹಿಂದೂ ಮಹಾಸಭಾ ಅಧ್ಯಕ್ಷ ರಣಿಜೀತ್ ಬಚ್ಚನ್ ಅವರ ಶಂಕಿತ ಕೊಲೆಗಾರರ ಸಿಸಿಟಿವಿ ದೃಶ್ಯಾವಳಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಶಂಕಿತನ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಪೊಲೀಸರು 50,000 ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ. ಭಾನುವಾರ, ಬಚ್ಚನ್ ಅವರು ಹಜರತ್ಗಂಜ್ ಪ್ರದೇಶದಲ್ಲಿ ಬೆಳಿಗ್ಗೆ ವಾಕಿಂಗ್ ಗೆ ಎಂದು ತೆರಳಿದ್ದಾಗ ಬೈಕ್ನಿಂದ ಬಂದ ಹಲ್ಲೆಕೋರರಿಂದ ಗುಂಡಿಕ್ಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು.
ರಣಿಜೀತ್ ಸ್ಥಳದಲ್ಲೇ ಅಸುನೀಗಿದ್ದು ಅವರೊಂದಿಗೆ ಇದ್ದ ಸೋದರ ಸಂಬಧಿ ಅಧಿತ್ಯ ಶ್ರಿವಾಸ್ತವ ಅವರಿಗೂ ಅಲ್ಪ ಪ್ರಮಾಣದ ಗಾಯಗಳಾಗಿತ್ತು. ಘಟನೆ ಸಂಬಂಧ ನಿರ್ಲಕ್ಷ್ಯ ಆರೋಪದಡಿ ನಾಲ್ವರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎಂದು ಡಿಸಿಪಿ ಸೆಂಟ್ರಲ್ ಲಕ್ನೋ ದಿನೇಶ್ ಸಿಂಗ್ ಹೇಳಿದ್ದಾರೆ.