ತಿರುವನಂತಪುರಂ, ಫೆ 03 (Daijiworld News/MB) : ಭಾತರದ ಎರಡನೇ ಕೊರೋನಾ ವೈರಸ್ ಪ್ರಕರಣವೂ ಕೂಡಾ ಕೇರಳದಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು, ಆಯೋಜಿಸಲಾಗಿರುವ ಮದುವೆ ಸಮಾರಂಭಗಳನ್ನು ಹಾಗೂ ಸಾರ್ವಜನಿಕ ಸಭೆ ಮಂದೂಡಲು ತಿಳಿಸಿದ್ದಾರೆ.
ಕೇರಳದಲ್ಲಿ ಮೊದಲ ಪ್ರಕರಣವು ಚೀನಾದಿಂದ ಭಾರತಕ್ಕೆ ಹಿಂದಿರುಗಿದ ವಿದ್ಯಾರ್ಥಿನಿಯಲ್ಲಿ ಪತ್ತೆಯಾಗಿತ್ತು. ಆದರೆ ಎರಡನೇ ಪ್ರಕರಣವೂ ಕೂಡಾ ಕೇರಳದಲ್ಲೇ ಪತ್ತೆಯಾಗಿರುವ ಹಿನ್ನಲೆಯಲ್ಲಿ ಎಲ್ಲಾ ವಿವಾಹ ಸಮಾರಂಭ ಹಾಗೂ ಸಾರ್ವಜನಿಕವಾಗಿ ಸೇರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಬೇಕು, ಹೀಗೆ ಮುಂದೂಡುವುದರಿಂದ ಹೆಚ್ಚು ನಷ್ಟವಾಗುವುದಿಲ್ಲ. ಆದರೆ ನೂರರು ಜನರು ಈ ಕಾರ್ಯಕ್ರಮಗಳಿಗೆ ಬರುವುದರಿಂದ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ನಮ್ಮದು ಹೆಚ್ಚಿನ ಜನಸಂಖ್ಯೆ ಇರುವ ರಾಜ್ಯ, ಒಂದು ವೇಳೆ ಈ ವೈರಸ್ ಹಬ್ಬಿದಲ್ಲಿ ಬಹಳ ತೊಂದರೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಕೊರೋನಾ ವೈರಸ್ ಲಕ್ಷಣ ಕಂಡು ಬಂದಿರುವವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಎನ್ಐವಿಗೆ ಕಳುಹಿಸಲಾಗಿದೆ. ಇನ್ನಷ್ಟೆ ಅದರ ವರದಿ ಬರಬೇಕಾಗಿದೆ. ಹಾಗೆಯೇ ಶೀಘ್ರವಾಗಿ ವರದಿ ನೀಡುವಂತೆ ಸರ್ಕಾರ ಎನ್ಐವಿ ಬಳಿ ಮನವಿ ಮಾಡಿದೆ. ನಮಗೆ ವರದಿ ದೊರೆತ ಬಳಿಕ ಅವರ ಅನುಮತಿ ಪಡೆದು ಇಲ್ಲಿ ಪರೀಕ್ಷೆ ನಡೆಸಬೇಕು. ಈವರೆಗೆ 56 ಜನರ ರಕ್ತದ ಮಾದರಿಯನ್ನು ಕಳುಹಿಸಲಾಗಿದ್ದು ಆ ಪೈಕಿ 24 ಜನರ ವರದಿ ಬಂದಿದೆ, ಇಂದು ಸಂಜೆಯ ಒಳಗಾಗಿ ಉಳಿದ ವರದಿಗಳು ಬರಬಹುದು ಎಂದು ತಿಳಿಸಿದ್ದಾರೆ.
ಈ ವೈರಸ್ ತಗುಲಿದರೆ ಸರಿಯಾದ ಚಿಕಿತ್ಸೆಯಿಲ್ಲ. ಆದರೆ ಸರಿಯಾದ ಆರೈಕೆ ಹಾಗೂ ವಿಶ್ರಾಂತಿ ಪಡೆಯುವುದು ಮುಖ್ಯ. ಈ ವೈರಸ್ ತಗಲಿದ್ದಲ್ಲಿ ಎಲ್ಲಾ ಲಕ್ಷಣಗಳು ಕಂಡು ಬರುವುದಿಲ್ಲ ಎಂದು ತಿಳಿಸಿದ್ದಾರೆ.