ಇಂದೋರ್, ಫೆ.03 (Daijiworld News/PY) : "ಪಾಕಿಸ್ತಾನದ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅದ್ನಾನ್ ಸಾಮಿ ಅವರ ತಂದೆ ಭಾರತದ ಮೇಲೆ ಬಾಂಬುಗಳನ್ನು ಎಸೆದಿದ್ದರು. ಆದರೆ, ಹೀಗೆ ಬಾಂಬು ಎಸೆದವನ ಮಗನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ" ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಫೆ.2 ಭಾನುವಾರದಂದು ಮಧ್ಯಪ್ರದೇಶದಲ್ಲಿ ನಡೆದ ಸಂವಿಧಾನವನ್ನು ಉಳಿಸಿ, ದೇಶವನ್ನು ಉಳಿಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಪಿಎಎಫ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಅದ್ನಾನ್ ಸಾಮಿ ಅವರ ತಂದೆ ಭಾರತದ ಮೇಲೆ ಬಾಂಬುಗಳನ್ನು ಎಸೆದಿದ್ದರು. ಆದರೆ, ಹೀಗೆ ಬಾಂಬು ಎಸೆದವನ ಮಗನಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿದೆ" ಎಂದು ಹೇಳಿದ್ದಾರೆ.
"ಮೋದಿ ಸರ್ಕಾರದ ಅಡಿಯಲ್ಲಿ ಅವರಿಗೆ ಭಾರತೀಯ ಪೌರತ್ವ ದೊರೆತಿದೆ. ಆದರೆ, ಅದ್ನಾನ್ ಸಾಮಿಗೆ ಪದ್ಮಶ್ರೀ ನೀಡಿ ಎಂದು ನಾನು ಎಂದಿಗೂ ಕೇಂದ್ರ ಸರ್ಕಾರಕ್ಕೆ ಯಾವುದೇ ಶಿಫಾರಸು ಮಾಡಿಲ್ಲ. ಸಾಮಿ ಪಾಕಿಸ್ತಾನದಿಂದ ಬಂದ ಕಲಾವಿದನಾಗಿರುವುದರಿಂದ, ನಾನು ಅವರ ಪ್ರಕರಣವನ್ನು ಪೌರತ್ವಕ್ಕಾಗಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆ" ಎಂದು ತಿಳಿಸಿದ್ದಾರೆ.
"ಪಾಕಿಸ್ತಾನದ ವಾಯುಪಡೆಯ ಪೈಲಟ್ ಆಗಿದ್ದ ಸಂದರ್ಭ ಅದ್ನಾನ್ ಸಮಿ ಅವರ ತಂದೆ 1965ರಲ್ಲಿ ಭಾರತದ ಮೇಲೆ ಬಾಂಬುಗಳನ್ನು ಎಸೆದಿದ್ದರು. ಇದಕ್ಕೆ ವಿರುದ್ದವಾಗಿ ಶತ್ರುಗಳ ವಿರುದ್ದ ಹೋರಾಡಿದ ಅಸ್ಸಾಂ ರಾಜ್ಯದ ಭಾರತೀಯ ಸೇನಾನಿ ಸನಾವುಲ್ಲಾ ಅವರ ದಾಖಲೆಗಳನ್ನು ತೋರಿಸಲು ವಿಫಲವಾದ ಕಾರಣ ಬಂಧನ ಶಿಬಿರಕ್ಕೆ ಕಳುಹಿಸಲಾಗಿದೆ. ಇದು ಮೋದಿ ಸರ್ಕಾರದ ಪೌರತ್ವ ಕಾನೂನಿ ಮಾದರಿ" ಎಂದು ಹೇಳಿದ್ದಾರೆ.