ನವದೆಹಲಿ, ಫೆ.03 (Daijiworld News/PY) : "ಪ್ರಧಾನಿ ಮೋದಿ ಅವರೇ ನಿಮ್ಮ ವ್ಯಾಯಾಮ ದಿನಚರಿಯನ್ನು ಇನ್ನು ಸ್ವಲ್ಪ ದಿನ ಮುಂದುವರೆಸಿ ನಿಮಗೆ ತಿಳಿದಿಲ್ಲ. ಇದರಿಂದ ದೇಶದ ಆರ್ಥಿಕತೆ ಸುಧಾರಿಸಬಹುದು" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
"ಡಿಯರ್ ಪ್ರಧಾನಿ, ನೀವು ಮಾಡುವ ವ್ಯಾಯಾಮಗಳನ್ನು ಇನ್ನು ಸ್ವಲ್ಪ ದಿನಗಳ ಕಾಲ ಮುಂದುವರೆಸಿ. ನಿಮಗೆ ತಿಳಿದಿಲ್ಲ ಇದರಿಂದ ಆರ್ಥಿಕತೆಯನ್ನು ಸುಧಾರಿಸಬಹುದು" ಎಂದು ಬರೆದು ಯೋಗ ದಿನದಂದು ಪ್ರಧಾನಿ ಮೋದಿ ಅವರು ಮಾಡಿದ ವಿಡಿಯೋಗೆ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ರಾಹುಲ್ ಅವರು, "ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತದ ಜಿಡಿಪಿಯು ಶೇ 9ಕ್ಕೆ ಏರಿಕೆಯಾಗಿತ್ತು. ಇಡೀ ವಿಶ್ವವೇ ಆಗ ನಮ್ಮತ್ತ ತಿರುಗಿ ನೋಡುತ್ತಿತ್ತು. ಇಂದು ಜಿಡಿಪಿಯನ್ನು ಅಳೆಯಲು ವಿವಿಧ ಮಾನದಂಡಗಳನ್ನು ಉಪಯೋಗಿಸಲಾಗುತ್ತಿದೆ ಹಾಗೂ ಅದರಂತೆ ಜಿಡಿಪಿ ಶೇ 5ರಷ್ಟಿದೆ. ಒಂದು ವೇಳೆ ನೀವು ಹಳೆಯ ಮಾನದಂಡಗಳನ್ನು ಉಪಯೋಗಿಸಿದ್ದೇ ಆದಲ್ಲಿ ಭಾರತದ ಬೆಳವಣಿಗೆ ದರವು ಶೇ 2.5ರಷ್ಟಿದೆ" ಎಂದು ಹೇಳಿದ್ದರು.
"ಪ್ರಧಾನಿ ಮೋದಿ ಅವರು 2 ಲಕ್ಷ ಉದ್ಯೋಗ ನೀಡುವುದಾಗಿ ವಿಶ್ವಾಸ ಕೊಟ್ಟಿದ್ದರು. ಆದರೆ ಕಳೆದ ವರ್ಷ ನಮ್ಮ ಯುವಜನತೆ 1 ಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಪ್ರಧಾನಿ ಅವರು ಎಲ್ಲಿಗೇ ಹೋದರು ಸಹ ಸಿಎಎ, ಎನ್ಆರ್ಸಿ ವಿಚಾರವಾಗಿ ಮಾತನಾಡುತ್ತಾರೆಯೇ ಹೊರತು ಅತಿದೊಡ್ಡ ಸಮಸ್ಯೆಗಳಾದ ನಿರುದ್ಯೋಗದ ಕುರಿತಾಗಿ ಮಾತನಾಡುವುದಿಲ್ಲ" ಎಂದಿದ್ದರು.