ಹೈದರಾಬಾದ್, ಫೆ 03 (Daijiworld News/MB) : ಕಳೆದ ವರ್ಷ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ್ದು ನಾಲ್ವರು ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮೂಲಕ ಹತ್ಯೆ ಮಾಡಿದ್ದರು. ಈಗ ಈ ಪ್ರಕರಣವನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ.
ರಾಮ್ ಗೋಪಾಲ್ ಅವರು ಈ ಪ್ರಕರಣವನ್ನು ಸಿನಿಮಾ ಮಾಡಲಿರುವ ಹಿನ್ನಲೆಯಲ್ಲಿ ನಾಲ್ವರು ಆರೋಪಿಗಳಲ್ಲಿ ಓರ್ವನಾದ ಚೆನ್ನಕೇಶವುಲು ಪತ್ನಿ ರೇಣುಕ ಅವರನ್ನು ಸಂದರ್ಶನ ಮಾಡಿದ್ದು, ಆ ಬಳಿಕ ಈ ಬಗ್ಗೆ ಟ್ವೀಟ್ ಮಾಡಿ ಪಶುವೈದ್ಯೆ ಅತ್ಯಾಚಾರಿ ತನ್ನ ಪತ್ನಿಯನ್ನೂ ಅತ್ಯಾಚಾರ ಮಾಡಿದ್ದ ಎಂದು ಹೇಳಿದ್ದಾರೆ.
ಹಾಗೆಯೇ, ಪಶುವೈದ್ಯೆ ಅತ್ಯಾಚಾರಿ ಚೆನ್ನಕೇಶವುಲುವಿನ ಪತ್ನಿ ರೇಣುಕಾಳನ್ನು ನಾನು ಈಗ ಭೇಟಿ ಮಾಡಿದೆ. ರೇಣುಕಾ ಚೆನ್ನಕೇಶವುಲುನನ್ನು 16 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾಳೆ. ಈಗ ಆಕೆಗೆ 17 ವರ್ಷವಾಗಿದೆ. ಆದರೆ ಈಗಲೇ ಆಕೆ ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ದಿಶಾ ಮೇಲೆ ಮಾತ್ರವಲ್ಲದೇ ತನ್ನ ಆತನ ಪತ್ನಿಯೂ ಸಂತ್ರಸ್ತೆಯಾಗಿದ್ದಾಳೆ. ಆಕೆಯೇ ಒಂದು ಮಗು ಈಗ ಮತ್ತೊಂದು ಮಗುವಿಗೆ ಜನ್ಮ ನೀಡುತ್ತಿದ್ದಾಳೆ. ಆದರೆ ಇಬ್ಬರಿಗೂ ಭವಿಷ್ಯವಿಲ್ಲ ಟ್ವೀಟ್ ಮಾಡಿದ್ದಾರೆ.
ಪಶು ವೈದ್ಯೆ ಅತ್ಯಾಚಾರಿಗಳು ಪಶುವೈದ್ಯೆಯನ್ನು ಸುಟ್ಟ ಘಟನಾ ಸ್ಥಳ ಮಹಜರು ಮಾಡುವ ಸಂದರ್ಬದಲ್ಲಿ ಪೊಲೀಸರಿಗೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು ಈ ಸಂದರ್ಭದಲ್ಲಿ ಪೊಲೀಸರು ಎನ್ಕೌಂಟರ್ ಮಾಡಿ ಹತ್ಯೆ ಮಾಡಿದ್ದರು.
ಈ ಸಂದರ್ಭದಲ್ಲಿ ಆರೋಪಿಗಲ್ಲಲಿ ಓರ್ವನಾದ ಚೆನ್ನಕೇಶವುಲುನ ಪತ್ನಿ ರೇಣುಕಾ , "ವಿವಾಹವಾದ ಒಂದು ವರ್ಷದಲ್ಲೇ ನನ್ನ ಪತಿ ಸಾವನ್ನಪ್ಪಿದ್ದಾರೆ. ದಯವಿಟ್ಟು ಎನ್ಕೌಂಟರ್ ಮಾಡಿದ ಸ್ಥಳಕ್ಕೆ ನನ್ನನ್ನು ಕರೆದುಕೊಂಡು ಹೋಗಿ, ನಾನು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನನಗೆ ಪತಿಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದಳು.