ನವದೆಹಲಿ, ಫೆ 03 (Daijiworld News/MB) : ದೆಹಲಿ ಮುಖ್ಯಮಂತ್ರಿ "ಅರವಿಂದ ಕೇಜ್ರಿವಾಲ್ ಓರ್ವ ಭಯೋತ್ಪಾದಕ ಎನ್ನಲು ಸಾಕಷ್ಟು ಆಧಾರಗಳಿವೆ" ಎಂದು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಸೋಮವಾರ ವರದಿಗಾರೊಂದಿಗೆ ಮಾತನಾಡಿದ ಅವರು, "ಕೇಜ್ರಿವಾಲ್ ಮುಗ್ಧರಂತೆ ನಾಟಕ ಮಾಡುತ್ತಿದ್ದಾರೆ. ಕೇಜ್ರಿವಾಲ್ ತಮ್ಮನ್ನು ತಾವು ಅರಾಜಕತಾವಾದಿ ಎಂದು ಹಲವುಬಾರಿ ಕರೆದುಕೊಂಡಿದ್ದರು. ಅರಾಜಕತೆ ಪ್ರತಿಪಾದಕರಿಗೂ ಭಯೋತ್ಪಾದಕರಿಗೂ ವ್ಯತ್ಯಾಸವೇನಿದೆ ?" ಎಂದು ಅವರು ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಮುಗ್ಧರಂತೆ ನಾಟಕ ಮಾಡುತ್ತಿದ್ದು ಅವರು ಭಯೋತ್ಪಾದಕ ಎನ್ನಲು ಸಾಕಷ್ಟು ಆಧಾರಗಳಿವೆ ಎಂದರು.