ನವದೆಹಲಿ, ಫೆ 3 (DaijiworldNews/SM): ಸದಾ ಒಂದಲ್ಲ ಒಂದು ವಿವಾದದ ಬಾಂಬ್ ಸಿಡಿಸುತ್ತಿರುವ ಅನಂತ್ ಕುಮಾರ್ ಇದೀಗ ಹೊಸ ಬಾಂಬ್ ಸಿಡಿಸಿದ್ದು, ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ. ಸ್ವಾತಂತ್ರ್ಚ ಹೋರಾಟಕ್ಕೆ ಸಂಬಂಧಿಸಿ ಸಂಸದ ಅನಂತ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ವಿವಾದಕ್ಕೀಡಾಗಿದೆ. ಈ ಕಾರಣದಿಂದಾಗಿ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿಗೊಳಿಸಿದೆ.
ಮಹಾತ್ಮ ಗಾಂಧಿ ಅವರನ್ನು ಗುರಿಯಾಗಿಸಿ ಸಂಸದ ಅನಂತ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ವಿಚಾರವಾಗಿ ವಿವರಣೆಗೆ ಹಾಜರಾಗುವಂತೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ಬ್ರಿಟಿಷರೊಂದಿಗಿನ ಅಡ್ಜಸ್ಟ್ಮೆಂಟ್ ಎಂದು ಹೇಳುವ ಮೂಲಕ ಸಂಸದ ಅನಂತ್ ಕುಮಾರ್ ವಿವಾದ ಸೃಷ್ಠಿಸಿದ್ದರು.
ಅನಂತ್ ಕುಮಾರ್ ಹೆಗೆಡೆ ಹೇಳಿಕೆಗೆ ಸಾಕಾಷ್ಟು ವಿರೋಧಗಳು ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳು ಬಿಜೆಪಿ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸಿವೆ. ಈ ಸಂದರ್ಭದಲ್ಲಿ ನಳಿನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಸೋಕಾಸ್ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.