ನವದೆಹಲಿ, ಫೆ 04 (Daijiworld News/MB) : ದೇಶದಾದ್ಯಂತ ಭಾರತೀಯ ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಜಾರಿಗೆ ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ ಎಂದು ಕೆಂದ್ರ ಗೃಹ ಸಚಿವಾಲಯ ಲೋಕಸಭೆಯಲ್ಲಿ ಮಂಗಳವಾರ ಲಿಖಿತವಾಗಿ ಸ್ಪಷ್ಟನೆ ನೀಡಿದೆ.
ಕೇಂದ್ರವು ರಾಷ್ಟ್ರವ್ಯಾಪಿ ಎನ್ಆರ್ಸಿ ಜಾರಿ ಮಾಡುವ ಕುರಿತು ಯಾವುದೇ ತಿರ್ಮಾನ ಮಾಡಿಲ್ಲ. ಆ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಅವರು ಕೇಂದ್ರ ಗೃಹ ಸಚಿವಾಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಅವರು ತಿಳಿಸಿದ್ದಾರೆ.
ಹಲವು ರಾಜ್ಯಗಳಲ್ಲಿ ಸಿಎಎ ಬಗ್ಗೆ ಇರುವ ವಿರೋದ ನಮಗೆ ತಿಳಿದಿದೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಾವು ಸಂಪರ್ಕ ಮಾಡಿದ್ದೇವೆ. ಕಾಯ್ದೆಯ ಬಗ್ಗೆ ಅವರಿಗೆ ಇರುವ ಭಯವನ್ನು ನಿವಾರಿಸಲು ಹಾಗೂ ಸರ್ಕಾರದ ತೀರ್ಮಾನಗಳನ್ನು ತಿಳಿಸುವ ಸಲುವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪೌರತ್ವ ಕಾಯ್ದೆಯಿಂದ ಪಾಕಿಸ್ತಾನ, ಬಾಂಗ್ಲಾ ಮೊದಲಾದ ದೇಶಗಳಲ್ಲಿರುವ ಮುಸ್ಲಿಮರನ್ನು ಹೊರತು ಪಡಿಸಿ ಇತರ ಧರ್ಮದವರಿಗೆ ಭಾರತದ ಪೌರತ್ವ ನೀಡಲಾಗುತ್ತದೆ. ಆದರೆ ಇದು ಧರ್ಮದ ನಡುವೆ ತಾರತಮ್ಯ ಮಾಡುವ ಕಾಯ್ದೆ, ಸಂವಿಧಾನದ ಜಾತ್ಯಾತೀತ ಆಶಯಕ್ಕೆ ವಿರುದ್ಧವಾದದ್ದು ಎಂದು ಹೇಳಿ ದೇಶದಾದ್ಯಂತ ವಿರೋಧ ವ್ಯಕ್ತಪಡಿಸಲಾಗಿದೆ. ಹಾಗೆಯೇ ಎನ್ಆರ್ಸಿಗೂ ಕೂಡಾ ತೀವ್ರ ವಿರೋಧ ವ್ಯಕ್ತವಾಗಿದೆ.