ತುಮಕೂರು, ಫೆ 05 (Daijiworld News/MB) : ಎನ್ಜಿಒಗಳಿಗೆ ಸಬ್ಸಿಡಿ ಮೂಲಕ ಆಹಾರ ಧಾನ್ಯಗಳನ್ನು ಒದಗಿಸುವ ಅನ್ನದಾಸೋಹ ಯೋಜನೆಯನ್ನು ಸರ್ಕಾರ ನಿಲ್ಲಿಸಿದ್ದರಿಂದ ಸಿದ್ದಗಂಗಾ ಮಠಕ್ಕೂ ಇದರ ಪರಿಣಾಮ ಬೀರಿದೆ ಎಂಬ ವಿಷಯದ ಬಗ್ಗೆ ಮಾಜಿ ಆಹಾರ ಸಚಿವ ಯುಟಿ ಖಾದರ್ ಅವರು ಧ್ವನಿ ಎತ್ತಿದ್ದಾರೆ.
"ಈ ಯೋಜನೆಯನ್ನು ಉತ್ತರ ಭಾರತದ ಕೆಲವು ಎನ್ಜಿಒಗಳು ದುರುಪಯೋಗಪಡಿಸಿಕೊಂಡಿದೆ ಎಂದು ವರದಿಯಾಗಿದೆ, ಅದು ನಮ್ಮ ಮೇಲೂ ಪರಿಣಾಮ ಬೀರಿತು. ಮಠಕ್ಕೆ ಈವರೆಗೂ ದೊರೆಯುತ್ತಿದ್ದ 750 ಕ್ವಿಂಟಾಲ್ ಅಕ್ಕಿ ಮತ್ತು 200 ಕ್ವಿಂಟಾಲ್ ಗೋಧಿಯು ಈಗ ದೊರಕುತ್ತಿಲ್ಲ" ಎಂದು ಮಠದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.
ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ಮಠದಲ್ಲಿ 10,000 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಇದ್ದಾರೆ. ಪ್ರತಿದಿನ ಸರಾಸರಿ 3,000 ಜನರು ಇಲ್ಲಿಗೆ ಬರುತ್ತಾರೆ. ಅವರೆಲ್ಲರಿಗೂ ಈಗ ಶ್ರೀ ಶಿವಕುಮಾರ ಸ್ವಾಮೀಜಿಯ ಆಶೀರ್ವಾದದಿಂದ ಆಹಾರವನ್ನು ನೀಡಲಾಗುತ್ತಿದೆ" ಎಂದು ಅವರು ಟೀಕೆ ಮಾಡಿದ್ದಾರೆ.
ರಾಜ್ಯಾದ್ಯಂತ ರೈತರು ಮತ್ತು ಕೈಗಾರಿಕೋದ್ಯಮಿಗಳು ದೇಣಿಗೆ ಮತ್ತು ಆಹಾರ ಧಾನ್ಯಗಳಿಗೆ ಸಹಾಯ ಮಾಡಿದ್ದಾರೆ. ಶ್ರೀ ಶಿವಕುಮಾರ ಸ್ವಾಮೀಜಿ ನಿಧನರಾದ ಸಮಯದಲ್ಲಿ ಸಾವಿರಾರು ಕ್ವಿಂಟಾಲ್ ಭತ್ತ ಮಠಕ್ಕೆ ನೀಡಿದ್ದಾರೆ. ಅದನ್ನು ನಾವು ಬಳಕೆ ಮಾಡುತ್ತಿದ್ದೇವೆ. ಸದ್ಯಕ್ಕೆ ಊಟಕ್ಕೆ ತೊಂದರೆ ಉಂಟಾಗಿಲ್ಲ ಎಂದು ಅವರು ಹೇಳಿದ್ದಾರೆ.