ಮುಂಬೈ, ಫೆ.05 (Daijiworld News/PY): "ನನ್ನ ಹಿಂದುತ್ವವು ಬಿಜೆಪಿ ಹಿಂದುತ್ವದಂತಲ್ಲ"ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ.
"ನನಗೆ ಶಾಂತಿಯುತವಾಗಿಲ್ಲದ ಹಿಂದೂ ರಾಷ್ಟ್ರವು ಬೇಕಾಗಿಲ್ಲ. ಧರ್ಮವನ್ನು ಬಳಸಿಕೊಂಡು ಹಾಗೂ ಅಧಿಕಾರವನ್ನು ಹಿಡಿಯುವುದು ನನ್ನ ಹಿಂದುತ್ವವಲ್ಲ. ನಾವಿಬ್ಬರು ಒಂದೇ ಯೋಚನಾ ವಿಧಾನವನ್ನು ಹೊಂದಿಲ್ಲ" ಎಂದು ಹೇಳಿದರು.
"ದೇಶದಲ್ಲಿ ಅಶಾಂತಿಯನ್ನು ಸೃಷ್ಠಿಸುವುದು ಹಾಗೂ ಒಬ್ಬರನ್ನು ಮತ್ತೊಬ್ಬ ಕೊಲ್ಲುವುದು ನನ್ನ ಹಿಂದೂ ರಾಷ್ಟ್ರದ ಮಾದರಿಯಲ್ಲ" ಎಂದಿದ್ದಾರೆ.
ಈ ವಿಚಾರಕ್ಕೂ ಮೊದಲು, "ಮಹಾರಾಷ್ಟ್ರದಲ್ಲಿ ಎನ್ಆರ್ಸಿ ಜಾರಿಗೆ ಮಾಡಲು ಅವಕಾಶ ನೀಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯು ಜನರನ್ನು ಪೌರತ್ವ ಹಕ್ಕಿನಿಂದ ವಂಚಿತರನ್ನಾಗಿಸದು" ಎಂದು ತಿಳಿಸಿದ್ದರು.
ಶಿವಸೇನಾದ ಮುಖವಾಣಿ ಸಾಮ್ನಾದಲ್ಲಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದ ಅವರು, "ಸಿಎಎಯು ನಾಗರಿಕತ್ವದಿಂದ ಜನರನ್ನು ದೂರ ಕರೆದೊಯ್ಯುವುದಿಲ್ಲ. ಬದಲಾಗಿ ನೆರೆಯ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಾಗಿದೆ" ಎಂದು ಹೇಳಿದ್ದರು.