ಶಿವಮೊಗ್ಗ, ಫೆ.05 (Daijiworld News/PY): ಸ್ವಾತಂತ್ರ್ಯ ಹೋರಾಟಗಾರ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಮಾದಪ್ಪ ಬುಧವಾರ ತೀವ್ರ ಅನಾರೋಗ್ಯದಿಂದಾಗಿ ನಿಧನರಾಗಿದ್ದಾರೆ.
ಜಿ.ಮಾದಪ್ಪ ಅವರು ಅನಾರೋಗ್ಯವಿದ್ದ ಕಾರಣ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಜೆಡಿಎಸ್ ಪಕ್ಷದ ಸದಸ್ಯರಾಗಿದ್ದ ಜಿ. ಮಾದಪ್ಪ ಅವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು.
ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಫೆ.6 ಗುರುವಾರದಂದು ಬೆಳಗ್ಗೆ 10 ಗಂಟೆವರೆಗೆ ಗಾಂಧಿನಗರದ ಮಾದಪ್ಪ ಅವರ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಫೆ.6 ಗುರುವಾರದಂದು ಬೆಳಗ್ಗೆ 11 ಗಂಟೆಗೆ ಮಾದಪ್ಪ ಅವರ ಸ್ವ ಗ್ರಾಮ ಹೊನ್ನಾಳಿ ತಾಲೂಕಿನ ಯರೆಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ವರದಿ ತಿಳಿಸಿದೆ.