ನವದೆಹಲಿ, ಫೆ 05 (Daijiworld News/MB) : ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಖ್ಯ ನಟ ಎಂದು ಮಾಜಿ ಕ್ರಿಕೆಟಿಗ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಆರೋಪಿಸಿದ್ದಾರೆ.
ದೆಹಲಿ ಪೊಲೀಸರು ದೆಹಲಿಯ ಶಾಹೀನ್ಬಾಗ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವೇಳೆ ಅಲ್ಲಿಗೆ ಬಂದು ಪ್ರತಿಭಟನಕಾರರತ್ತ ಗುಂಡು ಹಾರಿಸಿದ್ದ ಕಪಿಲ್ ಗುಜ್ಜರ್ ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ಹೇಳಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ಗೌತಮ್ ಗಂಭೀರ್ ಅವರು ಅರವಿಂದ ಕೇಜ್ರಿವಾಲ್ ಅಧಿಕಾರಕ್ಕಾಗಿ ಯಾವ ಮಟ್ಟದ ನಾಟಕವನ್ನೂ ಆಡುತ್ತಾರೆ ಎಂದು ಟೀಕೆ ಮಾಡಿದ್ದಾರೆ.
ಇವರೊಬ್ಬ ಅದ್ಭುತ ಮುಖ್ಯಮಂತ್ರಿ!! ಮೊದಲಿಗೆ ಅಣ್ಣಾ ಹಜಾರೆಗೆ ಸುಳ್ಳು ಹೇಳಿದರು, ಬಳಿಕ ತನ್ನ ಸ್ನೇಹಿತರಿಗೆ ಸುಳ್ಳು ಹೇಳಿದರು, ಹಾಗೆಯೇ ದೆಹಲಿಯ ಸಾವಿರಾರು ಜನರಿಗೂ ಸುಳ್ಳು ಹೇಳಿದರು. ಇವರು ಮುಖ್ಯಮಂತ್ರಿಯೋ ಅಥವಾ ಮುಖ್ಯ ನಟನೋ? ಎಂದು ವ್ಯಂಗ್ಯ ಮಾಡಿದ್ದಾರೆ.
ಹಾಗೆಯೇ ಇನ್ನೊಂದು ಟ್ವೀಟ್ನಲ್ಲಿ, "ದೆಹಲಿಯ ಯುವಕರಲ್ಲಿ ನಾನು ಮನವಿ ಮಾಡುತ್ತೇನೆ. ಫೆಬ್ರವರಿ 8 ರಂದು ದೆಹಲಿಯ ಚುನಾವಣೆ ನಡೆಯಲಿದೆ. ಈ ಚುನಾವಣೆ ಬರೀ ಚುನಾವಣೆಯಲ್ಲಿ ನಮ್ಮ ಭವಿಷ್ಯ ನಿರ್ಧರಿಸುವ ಒಂದು ಯುದ್ಧ, ಈ ಯುದ್ಧವನ್ನು ನಾವು ಒಂದಾಗಿ ಹೋರಾಡುತ್ತೇವೆ, ದೆಹಲಿಯನ್ನು ದೆಹಲಿಯನ್ನಾಗಿ ಮಾಡುತ್ತೇವೆ. ಜೈ ಹಿಂದ್ ಎಂದು ಕಿಡಿಕಾರಿದ್ದಾರೆ.
ಹಾಗೆಯೇ ಅದರೊಂದಿಗೆ ದೆಹಲಿಯನ್ನು ಆಪ್ ಸುಡುತ್ತದೆ ಎಂಬ ಹ್ಯಾಶ್ ಟ್ಯಾಂಗ್ ಕೂಡಾ ಹಾಕಿದ್ದಾರೆ.
ಫೆಬ್ರವರಿ 8ರಂದು 70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಚಾರದ ಜೊತೆಗೆ ನಾಯಕರು ಹೇಳಿಕೆಗನ್ನು ನೀಡುತ್ತಿದ್ದಾರೆ.