ಚೆನ್ನೈ, ಫೆ.05 (Daijiworld News/PY): "ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ" ಎಂದು ನಟ, ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ಸೂಚಿಸಿದ ಅವರು, "ದೇಶದ ಯಾವುದೇ ಪ್ರಜೆಗೆ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ತೊಂದರೆಯಾಗುವುದಿಲ್ಲ. ಒಂದು ವೇಳೆ ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಆಗಿದ್ದೇ ಅದಲ್ಲಿ ಇದರ ವಿಚಾರವಾಗಿ ಮಾತನಾಡುವ ಮೊದಲ ವ್ಯಕ್ತಿ ನಾನೇ" ಎಂದು ತಿಳಿಸಿದ್ದಾರೆ.
ದೇಶಾದ್ಯಂತ ನಡೆಯಲಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರ ಮಾತನಾಡಿರುವ ರಜನಿಕಾಂತ್, "ಎನ್ಆರ್ಸಿ ಜಾರಿ ವಿಚಾರವಾಗಿ ಕೇಂದ್ರ ಸರ್ಕಾರ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಹೊರಗಿನವರನ್ನು ಗುರುತಿಸಲು ಎನ್ಪಿಆರ್ ಅವಶ್ಯಕವಾಗಿದೆ" ಎಂದು ಹೇಳಿದರು.
ದೇಶದ ವಿವಿದೆಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಯಾವುದೇ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಕಂಡುಹಿಡಿಯುವುದಕ್ಕೆ ಹಿಂಸಾಚಾರವೊಂದೇ ಮಾರ್ಗವಲ್ಲ" ಎಂದಿದ್ದರು.