ತುಮಕೂರು, ಫೆ 5 (Daijiworld News/MSP): ತುಮಕೂರು ನಗರದಲ್ಲಿ ವ್ಯಕ್ತಿಯೋರ್ವನಿಗೆ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ತುಮಕೂರು ನಗರದ ಹನುಮಂತಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಮೇಲೆ ವೈದ್ಯರು ನಿಗಾವಹಿಸಿದ್ದಾರೆ.
ಚೀನಾದ ವುಹಾನ್ ನಗರದ 700 ಕಿ.ಮಿ ದೂರದಲ್ಲಿನ ಹ್ಯಾಂಗ್ಝೂ ನಗರದಲ್ಲಿ ವಾಸವಾಗಿದ್ದ ಈ ವಿದ್ಯಾರ್ಥಿ 10 ದಿನದ ಹಿಂದೆ ತುಮಕೂರಿಗೆ ವಾಪಸ್ ಆಗಿದ್ದ. ತುಮಕೂರಿಗೆ ವಾಪಾಸ್ ಮರಳಿದಾಗದಿಂದ ಕೆಮ್ಮಿನಿಂದ ಬಳುತ್ತಿದ್ದ ವಿದ್ಯಾರ್ಥಿಯನ್ನು ಪರೀಕ್ಷಿಸಿದ ವೈದ್ಯರು ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಶಂಕಿತನ ಕಫ, ರಕ್ತ ಮಾದರಿಗಳನ್ನು ಪರೀಕ್ಷೆಗೆ ಬೆಂಗಳೂರಿಗೆ ರವಾನಿಸಿ ವೈದ್ಯರು ವರದಿಗೆ ಕಾಯುತ್ತಿದ್ದಾರೆ.
ವೈರಸ್ ಶಂಕಿತ ವಿದ್ಯಾರ್ಥಿಯನ್ನು ವೈದ್ಯರು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದಾರೆ. ಚೀನಾದಲ್ಲಿ ಮೂರು ವರ್ಷದದಿಂದ ಮೆಡಿಕಲ್ ಓದುತ್ತಿರುವ ತುಮಕೂರು ಮೂಲದ ವಿದ್ಯಾರ್ಥಿ ವುಹಾನ್ ನಲ್ಲಿ ವೈರಸ್ ಹರಡಿದ ತಕ್ಷಣ ತುಮಕೂರಿಗೆ ವಿದ್ಯಾರ್ಥಿ ವಾಪಸ್ ಆಗಿದ್ದ ಎನ್ನಲಾಗಿದೆ.