ನವದೆಹಲಿ, ಫೆ 06 (Daijiworld News/MB) : ಬಾಬರಿ ಮಸೀದಿ– ರಾಮಜನ್ಮಭೂಮಿ ವಿವಾದದಲ್ಲಿ ರಾಮ ಲಲ್ಲಾ ವಿರಾಜಮಾನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕೆ.ಪರಾಶರನ್ ಅವರ ನಿವಾಸವನ್ನು "ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ" ಟ್ರಸ್ಟ್ ಕಚೇರಿಯನ್ನಾಗಿ ಮಾಡಲಾಗಿದೆ.
ಗೃಹ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಟ್ರಸ್ಟ್ ನೋಂದಣಿ ವಿಳಾಸವು 'ಆರ್–20, ಗ್ರೇಟರ್ ಕೈಲಾಶ್ ಪಾರ್ಟ್–1, ನವದೆಹಲಿ, 110048' ಎಂದು ತಿಳಿಸಲಾಗಿದೆ. ಸುಪ್ರೀಂ ಕೋರ್ಟ್ ವಕೀಲರ ಸಂಘದ ವೆಬ್ಸೈಟ್ ಪ್ರಕಾರ ಪರಾಶರನ್ ಅವರ ನಿವಾಸದ ವಿಳಾಸ ಇದಾಗಿದೆ.
ಅವರು ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಹಿಂದೂ ಪಕ್ಷಗಾರರಿಗೆ ಪ್ರಮುಖ ಸಲಹೆಗಾರರಾಗಿದ್ದು ರಾಮ ಲಲ್ಲಾ ವಿರಾಜಮಾನ್ ಪರ ಸುಪ್ರೀಂ ಕೋರ್ಟ್ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಈ ಹಿನ್ನಲೆಯಲ್ಲಿ ವಿವಾದಿತ ಭೂಮಿಯನ್ನು ಸಂಪೂರ್ಣವಾಗಿ ರಾಮ ಮಂದಿರ ನಿರ್ಮಾಣಕ್ಕೆ ನೀಡಲಾಯಿತು.
ಪರಾಶರನ್ ಅವರು 92 ವರ್ಷ ವಯಸ್ಸಿನವರಾಗಿದ್ದು, ಈ ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದಲ್ಲಿ ನಡೆಸಿ ಸೂಕ್ತ ನ್ಯಾಯ ನೀಡಬೇಕು. ನಾನು ಈ ಪ್ರಕರಣದ ಸಾಯುವ ಮೊದಲು ಈ ಪ್ರಕರಣ ಇತ್ಯರ್ಥವಾಗಬೇಕು. ಇದು ನನ್ನ ಕೊನೆಯ ಆಸೆ ಎಂದು ಹೇಳಿದ್ದರು.
ಹಾಗೆಯೇ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಟ್ರಸ್ಟ್ ಘೋಷಣೆಗೆ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಆಯೋಗದ ವಕ್ತಾರರು, ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ರಚಿಸಿ ಪ್ರಕಟಿಸಿರುವುದಕ್ಕೆ ಚುನಾವಣಾ ಆಯೋಗದ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ಮೋದಿ ಟ್ರಸ್ಟ್ ರಚನೆ ಕುರಿತು ಘೋಷಣೆ ಮಾಡಿದ ಬಳಿಕ ಮಾತನಾಡಿದ ಶಾ, "ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನಿರ್ಮಾಣಕ್ಕಾಗಿ ಸ್ಥಾಪಿಸಲಾಗಿರುವ ಟ್ರಸ್ಟ್ನಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಸೇರಿದಂತೆ 15 ಟ್ರಸ್ಟಿಗಳಿರಲಿದ್ದಾರೆ" ಎಂದು ಹೇಳಿದ್ದಾರೆ.