ಲಖನೌ, ಫೆ 06 (Daijiworld News/MB) : ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಗೆ ನೀಡಿರುವ ಐದು ಎಕರೆ ಭೂಮಿಯನ್ನು ನಮಗೆ ನೀಡಿದ್ದಲ್ಲಿ ಅಯೋಧ್ಯೆಯಲ್ಲಿ ಮತ್ತೊಂದು ರಾಮ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದೆವು ಎಂದು ಉತ್ತರ ಪ್ರದೇಶದ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಬುಧವಾರ ಹೇಳಿದೆ.
ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಾಸೀಂ ರಿಜ್ವಿ, "ನಮಗೆ ಭೂಮಿ ನೀಡಿದ್ದರೆ ಅಯೋಧ್ಯೆಯಲ್ಲಿ ಮತ್ತೊಂದು ರಾಮ ಮಂದಿರ ನಿರ್ಮಿಸುತ್ತಿದ್ದೆವು" ಎಂದು ಹೇಳಿದ್ದಾರೆ.
ತನ್ನ ಜವಾಬ್ದಾರಿಯನ್ನು ಸರ್ಕಾರ ಬಹಳ ಸಮರ್ಥವಾಗಿ ನಿರ್ವಹಣೆ ಮಾಡಿದೆ. ಹಿಂದೂ ಸಮುದಾಯ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪಡೆಯಲಿದೆ. ಶಿಯಾ ಸಮುದಾಯವರ ಮಸೀದಿ ರಾಮ ಮಂದಿರದ ಬಳಿಯಲ್ಲಿತ್ತು ಆದರೆ ಭೂಮಿ ಸುನ್ನಿ ಮಂಡಳಿಗೆ ಹೋಗಿದೆ. ಈ ಬಗ್ಗೆ ಮಾತನಾಡದಿರುವುದು ಶಿಯಾ ಸಮುದಾಯದವರಿಂದ ದೊಡ್ಡ ತಪ್ಪು ಎಂದರು.