ಬೆಂಗಳೂರು, ಫೆ.06 (Daijiworld News/PY) : "ನಾನು ಪಕ್ಷದ ನಾಯಕರ ಬಳಿ ಭವಿಷ್ಯದಲ್ಲಿ ಎಂದಿಗೂ ಸಚಿವ ಸ್ಥಾನ ಕೇಳುವುದಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ರಾಜಕೀಯ ಅಂದರೆ ಕೆಲವೊಮ್ಮೆ ಸನ್ಯಾಸಿಯಾಗಿಯೂ ಇರಬೇಕಾಗುತ್ತದೆ" ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಾನು ಪಕ್ಷದ ನಾಯಕರ ಬಳಿ ಭವಿಷ್ಯದಲ್ಲಿ ಎಂದಿಗೂ ಸಚಿವ ಸ್ಥಾನ ಕೇಳುವುದಿಲ್ಲ. ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ. ರಾಜಕೀಯ ಅಂದರೆ ಕೆಲವೊಮ್ಮೆ ಸನ್ಯಾಸಿಯಾಗಿಯೂ ಇರಬೇಕಾಗುತ್ತದೆ. ಕ್ಷೇತ್ರದ ಜನರು ನನ್ನನ್ನು ಸಚಿವನಾಗಬೇಕು ಎಂದೇ ಆಯ್ಕೆ ಮಾಡಿಲ್ಲ. ನಾನು ಕ್ಷೇತ್ರದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ" ಎಂದರು.
"ಸಿ.ಪಿ. ಯೋಗೇಶ್ವರ್ ಹಾಗೂ ನಾನು ಉತ್ತಮ ಸ್ನೇಹಿತರು. ಆದರೆ, ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಸಿಗದಿರುವ ವಿಚಾರದಲ್ಲಿ ನನ್ನ ಹಾಗೂ ಸಿಎಂ ಬಿಎಸ್ವೈ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ" ಎಂದು ಹೇಳಿದರು.