ನವದೆಹಲಿ, ಫೆ 06 (Daijiworld News/MB) : "ಯುವಜನರು ಪ್ರಧಾನಿಗೆ ಬಡಿಗೆ ತೆಗೆದುಕೊಂಡು ಏಟು ನೀಡಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಬುಧವಾರ ಮಾತನಾಡಿದ ಅವರು, "ಪ್ರಧಾನಿ ಈಗ ಭಾಷಣ ಮಾಡುತ್ತಲೇ ಇದ್ದಾರೆ, ಆದರೆ ಆರು ತಿಂಗಳ ಬಳಿಕ ಅವರಿಗೆ ಮನೆಯಿಂದ ಹೊರಬರಲು ಸಾಧ್ಯವಾಗದು, ಭಾರತದ ಯುವಜನರೇ ಬಡಿಗೆ ತೆಗೆದುಕೊಂಡು ಪ್ರಧಾನಿಗೆ ಬಡಿಯುತ್ತಾರೆ, ಯುವಜನರಿಗೆ ಉದ್ಯೋಗ ನೀಡದೆ ಈ ದೇಶದ ಉದ್ಧಾರ ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಸುತ್ತಾರೆ" ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾಋವು ಯುವಜನರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ, ದೇಶದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಗರಿಷ್ಠವಾಗಿದೆ. ಆದರೆ ಬಜೆಟ್ನಲ್ಲಾಗಲೀ ರಾಷ್ಟ್ರಪತಿ ಭಾಷಣದಲ್ಲಾಗಲೀ ಈ ಕುರಿತು ಯಾವುದೇ ಉಲ್ಲೇಖ ಮಾಡಿಲ್ಲ" ಎಂದು ಅವರು ಆರೋಪಿಸಿದರು.
"ಪ್ರಧಾನಿ ನರೇಂದ್ರ ಮೋದಿಗೆ ಯುವಜನರಿಗೆ ಉದ್ಯೋಗ ಸಿಗುವುದು ಬೇಕಿಲ್ಲ, ಯಾಕೆಂದರೆ ಅವರ ರಾಜಕೀಯಕ್ಕೆ ಇದುವೇ ಆಮ್ಲಜನಕವಿದ್ದಂತೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.