ಬೆಂಗಳೂರು, ಫೆ 06 (Daijiworld News/MB) : ಯಡಿಯೂರಪ್ಪ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ಗುಣ ಲಕ್ಷಣವಿದೆ, ನಾನೂ ಕೂಡಾ ಮುದೊಂದು ದಿನ ಸಚಿವನಾಗುತ್ತೇನೆ ಎಂದು ಎಂ.ಟಿ.ಬಿ. ನಾಗರಾಜ್ ಅವರು ಹೇಳಿದ್ದಾರೆ.
ನನಗೂ ಮಂತ್ರಿ ಸ್ಥಾನ ಸಿಗಬೇಕು ಎಂಬುದು ನನ್ನ ಕ್ಷೀತ್ರದ ಜನರ ಬಯಕೆಯಾಗಿದೆ, ಕೊಟ್ಟ ಮಾತನ್ನು ಮರೆಯುವವರಲ್ಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ನನಗೂ ಯಡಿಯೂರಪ್ಪನವರೇ ಆಹ್ವಾನ ನೀಡಿದ್ದರು. ಸ್ಥಳೀಯ ಚುನಾವಣೆಯ ಹಿನ್ನಲೆಯಿಂದ ನನಗೆ ಹಾಜರಾಗಲು ಸಾಧ್ಯವಾಗಿಲ್ಲ. ನೂತನ ಸಚಿವರಿಗೆ ಶುಭಕೋರುತ್ತೇನೆ ಎಂದರು.