ನವದೆಹಲಿ, ಫೆ.06 (Daijiworld News/PY) : ಚೀನಾದವರಿಗೆ ಭಾರತ ನೀಡಿರುವ ವೀಸಾಗಳ ಮಾನ್ಯತೆಯನ್ನು ಭಾರತ ಸರ್ಕಾರ ಗುರುವಾರ ರದ್ದು ಮಾಡಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ವೀಸಾಗಳಿಗೆ ಮಾನ್ಯತೆಯಿಲ್ಲ ಹಾಗೂ ಸಾಮಾನ್ಯ ವೀಸಾಗಳೂ ಮಾನ್ಯತೆ ಕಳೆದುಕೊಳ್ಳಲಿದ್ದು, ಅವಶ್ಯವಾದ ಕಾರಣಗಳಿಂದ ಭಾರತಕ್ಕೆ ಬರಲು ವೀಸಾ ಅಗತ್ಯವಿದ್ದರೆ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ಹೊಸದಾದ ವೀಸಾಕ್ಕೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಈಗಾಗಲೇ 640 ಭಾರತೀಯರನ್ನು ಹಾಗೂ ಏಳು ಮಂದಿ ಮಾಲ್ಡೀವ್ಸ್ ಪ್ರಜೆಗಳನ್ನೂ ನಾವು ಯಶಸ್ವಿಯಾಗಿ ದೇಶಕ್ಕೆ ಕರೆ ತಂದಿದ್ದೇವೆ. ಅತ್ಯಂತ ಸಂಕೀರ್ಣ ಕಾರ್ಯಾಚರಣೆಯನ್ನು ನಾವು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಇದಕ್ಕೆ ನೆರವಾದ ಚೀನಾ ಸರ್ಕಾರದ ನಡೆಯನ್ನು ಭಾರತ ಅಭಿನಂದಿಸುತ್ತದೆ ಎಂದರು