ಚಿಕ್ಕಮಗಳೂರು, ಫೆ.07 (Daijiworld News/PY) : "ಕುಮಾರಸ್ವಾಮಿ ಅವರ ವಿರುದ್ದ ವೈಯುಕ್ತಿಕ ಟೀಕೆ ಮಾಡಿಲ್ಲ. ಅವರು ಗಂಭೀರ ರಾಜಕಾರಣಿಯೇ ಅಲ್ಲ. ಕೀಳು ಮಟ್ಟದ ಪದ ಬಳಕೆ ಮಾಡುತ್ತಾರೆ" ಎಂದು ಶ್ರೀರಾಮುಲು ಹೇಳಿದ್ದಾರೆ.
ಚಿಕ್ಕಮಗಳೂರಿಗೆ ಭೇಟಿ ನೀಡಿ ಮಾತನಾಡಿದ ಅವರು, "ಅವರ ಭಾಷೆಯೇ ಬೇರೆ, ನನ್ನ ಭಾಷೆಯೇ ಬೇರೆ. ಯಾರ್ಯಾರ ಮನೆ ಹಾಳು ಮಾಡಿದ್ದಾರೆ ಎಂಬ ವಿಚಾರ ತಿಳಿದಿದೆ. ಈ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ" ಎಂದರು.
ಬಳಿಕ ಕೊರೋನಾ ವೈರಸ್ ವಿಚಾರವಾಗಿ ಮಾತನಾಡಿದ ಅವರು, "ಕೇರಳ ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನಲೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಹೀಗಾಗಿ ರಾಜ್ಯದಲ್ಲಿ 97 ಮಂದಿಯ ರಕ್ತ ಪರೀಕ್ಷೆ ನಡೆಸಲಾಗಿದ್ದು, ರಕ್ತ ಪರೀಕ್ಷೆಯ ವೇಳೆ ನೆಗೆಟಿವ್ ಬಂದಿದೆ. ಕೊರೋನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವುದಕ್ಕೋಸ್ಕರ ಮೊಬೈಲ್ ಎಲ್ಇಡಿ ವ್ಯಾನ್ಗೆ ಚಾಲನೆ ನೀಡಲಾಗಿದೆ. ಈ ವ್ಯಾನ್ ರಾಜ್ಯದ 17 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜನರಲ್ಲಿ ಜಾಗ್ರತಿ ಮೂಡಿಸುತ್ತಿದೆ" ಎಂದು ತಿಳಿಸಿದರು.