ಬೆಂಗಳೂರು, ಫೆ.7 (Daijiworld News/MSP): ಸಚಿವ ಸಂಪುಟಕ್ಕೆ ಹತ್ತು ಮಂದಿ ನೂತನ ಸಚಿವ ಸೇರ್ಪಡೆಯಾಗುತ್ತಿದ್ದಂತೆ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೂತನ ಸಚಿವರು ವಾರಕ್ಕೊಮ್ಮೆಯಾದರೂ ಪಕ್ಷದ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮೌಖಿಕ ಸೂಚನೆ ನೀಡಿದ್ದು, , ಸಚಿವರು ವಾರಕ್ಕೆ ಒಂದು ಬಾರಿಯಾದರೂ ಕನಿಷ್ಟ ಎರಡು ಗಂಟೆಗಳ ಕಾಲ ಪಕ್ಷದ ಕಚೇರಿಗೆ ಹಾಜರಾಗಬೇಕು, ಪಕ್ಷದ ಕಾರ್ಯಕರ್ತರ ಸಮಸ್ಯೆ, ಆಲಿಸಬೇಕು ಎಂದು ಅವರಿಗೆ ತಿಳಿಸಲಾಗಿದೆ.
ಮಾತ್ರವಲ್ಲದೆ ಸಚಿವರು ಬಹಿರಂಗವಾಗಿ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಪಕ್ಷದ ಮುಖಂಡರು ಮತ್ತು ಹಿರಿಯ ಕಾರ್ಯಕರ್ತರಲ್ಲದೆ, ನೂತನ ಮಂತ್ರಿಗಳು ಸಹ ಪಕ್ಷದ ಕಾರ್ಯಕರ್ತರ ಸಮಸ್ಯೆಗಳು ಮತ್ತು ವಿನಂತಿಗಳಿಗೆ ಕಿವಿಗೊಡಬೇಕು ಎಂದು ಕಟೀಲ್ ಸೂಚಿಸಿದ್ದಾರೆ.
ಇದಕ್ಕೆ ಒಪ್ಪಿದ ನೂತನ ಸಚಿವರು ಪಕ್ಷದ ವರಿಷ್ಠರು ಟೈಂ ಟೇಬಲ್ ನೀಡಿದ್ದು, ಇದನ್ನು ನಾವು ಪಾಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.