ಚಿಕ್ಕಮಗಳೂರು, ಫೆ.07 (Daijiworld News/PY): "ಸಿದ್ದರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ ಅವರು ಒಂದೇ ಪಕ್ಷದಲ್ಲಿದ್ದರೂ ಒಂದಾಗಿ ಕೆಲಸ ಮಾಡಿಲ್ಲ. ಅಧಿಕಾರ ಎಲ್ಲಿರುತ್ತದೋ ಸಿದ್ದರಾಮಯ್ಯ ಅಲ್ಲಿರುತ್ತಾರೆ" ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಕಲ್ಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿದ್ದರಾಮಯ್ಯ, ದೇವೇಗೌಡರು, ಕುಮಾರಸ್ವಾಮಿ ಅವರು ಒಂದೇ ಪಕ್ಷದಲ್ಲಿದ್ದರೂ ಒಂದಾಗಿ ಕೆಲಸ ಮಾಡಲಿಲ್ಲ. ಟೀಕೆ ಮಾಡಿಕೊಳ್ಳುತ್ತಾ ಬಂಡಾಯದಿಂದ ಹೊರ ಬಂದಿದ್ದಾರೆ. ಅಧಿಕಾರ ಎಲ್ಲಿರುತ್ತದೋ ಸಿದ್ದರಾಮಯ್ಯ ಅಲ್ಲಿರುತ್ತಾರೆ" ಎಂದರು.
"ಪ್ರತಿಪಕ್ಷ ನಾಯಕ, ಕೆಪಿಸಿಸಿ ಅಧ್ಯಕ್ಷ ಯಾರು ಅನ್ನುವ ತೀರ್ಮಾನ ಮಾಡಲು ಸಾಧ್ಯವಾಗಿಲ್ಲ. ಇದಕ್ಕೆ ಸಿದ್ದರಾಮಯ್ಯನ ದುರಾಸೆಯೇ ಕಾರಣ. ಮೂಲ ಕಾಂಗ್ರೆಸ್ಸಿಗರ ಅವಕಾಶ ತೆಗೆದು ಅಲ್ಲಿ ಸರ್ವಾಧಿಕಾರಿಯಾಗಲು ಮುಂದಾಗಿದ್ದಾರೆ. ಈಗ ಅಲ್ಲಿಯೇ ವಿರೋಧ ಬರುತ್ತಿದೆ" ಎಂದು ತಿಳಿಸಿದರು.