ಮುಂಬೈ, ಫೆ 7 (DaijiworldNews/SM): ದೇಶದೆಲ್ಲೆಡೆ ಮಧ್ಯಮ ವರ್ಗದವರು ಹಣಾಕಾಸಿನ ತೊಂದರೆಯನ್ನು ಅನುಭವಿಸುತ್ತಿರುವ ಕೂಗು ಕೇಳಿ ಬರುತ್ತಿರುವ ಸಮಯದಲ್ಲೇ ಇದೀಗ ಕೇಂದ್ರ ಹಣಕಾಸು ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
"ಹಣಕಾಸು ಮಸೂದೆಯಲ್ಲಿ ಹೊಸ ಪ್ರಸ್ತಾವಿತ ಆದಾಯ ತೆರಿಗೆ ನಿಯಮಗಳ ಜಾರಿಗೆ ತರಲಾಗಿದೆ. ಇದರಿಂದಾಗಿ ಮಧ್ಯಮ ವರ್ಗದವರು ಹೆಚ್ಚಿನ ಹಣವನ್ನು ಹೊಂದಲಿದ್ದಾರೆ ಎಂಬುವುದಾಗಿ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ತಿಂಗಳ ಆರಂಭದಲ್ಲಿ ಮಂಡಿಸಿರುವ ಕೇಂದ್ರದ ಹಣಕಾಸು ಬಜೆಟ್ ಕುರಿತಂತೆ ಚರ್ಚೆ ನಡೆಸಲು ಸಭೆ ಸೇರಿದ ಸಂದರ್ಭದಲ್ಲಿ ಸಚಿವೆ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದಾಗಿ ಮಧ್ಯಮ ವರ್ಗದವರಿಗೆ ಹೆಚ್ಚಿನ ಲಾಭವಾಗಲಿದೆ ಎಂಬುವುದಾಗಿ ಸಚಿವೆ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯಾಯಸಮ್ಮತವಾದ ಕಾನೂನುಗಳನ್ನು ಜಾರಿಗೊಳಿಸಲು ಬಯಸುತ್ತೇವೆ. ಈ ಹಿಂದೆ ಇದ್ದ ಕಂಪೆನಿ ಕಾಯ್ದೆಯಿಂದ ಇದೀಗ ಆದಾಯ ತೆರಿಗೆ ಕಾಯ್ದೆಯತ್ತ ನಾವು ಬಂದಿದ್ದೇವೆ ಎಂದಿದ್ದಾರೆ. ಅಲ್ಲದೆ ಜನ ಸಾಮಾನ್ಯರು ಪಾವತಿಸುವ ತೆರಿಗೆ ಪದ್ಧತಿಯನ್ನು ಸರಳಗೊಳಿಸಲು ಕ್ರಮಕೈಗೊಂಡಿದ್ದೇವೆ, ಇದು ಪ್ರಧಾನಿ ನರೇಂದ್ರ ಮೋದಿಯವರ ಆಶಯವೂ ಕೂಡ ಆಗಿದೆ ಎಂಬುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.