ಕಲಬುರಗಿ, ಫೆ 08 (Daijiworld News/MB) : "ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ರಾಜ್ಯದ ಸಚಿವ ಸಂಪುಟ ಅಸಮತೋಲನವಾಗಿದೆ, ಇದು ಬಿಜೆಪಿ ಸರ್ಕಾರದಲ್ಲಿ ಅಸಮಧಾನಕ್ಕೆ ಕಾರಣವಾಗುತ್ತದೆ" ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪನವರು ಅಸಮರ್ಥ ಮುಖ್ಯಮಂತ್ರಿ, ಸಚಿವ ಸ್ಥಾನಕ್ಕೆ 13 ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಿಲ್ಲ, ಸಂಪುಟದಲ್ಲಿ ಇರಬೇಕಾದ ಸಾಮಾಜಿಕ ನ್ಯಾಯವೂ ಇಲ್ಲ" ಎಂದು ಟೀಕೆ ಮಾಡಿದರು.
"ಕೆಪಿಸಿಸಿ ಅಧ್ಯಕ್ಷರ ಆಯ್ಕೆಯು ದೆಹಲಿಯಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ವಿಳಂಬವಾಗಿದ್ದು ನಮ್ಮಲ್ಲಿ ಅಧ್ಯಕ್ಷರ ನೇಮಕಾತಿ ಕುರಿತಾಗಿ ಯಾವುದೇ ಗೊಂದಲವಿಲ್ಲ. ನಾವು ನಮ್ಮ ಅಭಿಪ್ರಯಾವನ್ನು ಹೈಕಮಾಂಡ್ಗೆ ತಿಳಿಸಿದ್ದೇವೆ. ನಾವು ಆಯ್ಕೆ ದಿನಾಂಕ ನಿಗದಿ ಮಾಡಲು ಆಗುವುದಿಲ್ಲ. ಅಧ್ಯಕ್ಷರ ನೇಮಕ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು" ಎಂದು ಹೇಳಿದರು.