ನವದೆಹಲಿ, ಫೆ.08 (Daijiworld News/PY) : ದೆಹಲಿಯ ಹಿರಿಯ ಮತದಾರರಾದ ಬಾಂಗ್ಲಾದೇಶ ಮೂಲದ ವೃದ್ದೆ ಕಾಳಿತರ ಮಂಡಲ್ ಎಂಬವವರು ತಮ್ಮ 111 ನೇ ವಯಸ್ಸಿನಲ್ಲಿ, ದೆಹಲಿಯ 70 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ಕುಟುಂಬದೊಂದಿಗೆ ಶನಿವಾರ ಮತಚಲಾಯಿಸಿದರು.
ಕಾಳಿತರ ಮಂಡಲ್ ಅವರಿಗೆ ಮತದಾನ ಕೇಂದ್ರಕ್ಕೆ ಹೋಗಲು ಗಾಲಿಕುರ್ಚಿ ವ್ಯವಸ್ಥೆ ಮಾಡಲಾಗಿದ್ದು, ಇವರು ಗ್ರೇಟರ್ ಕೈಲಾಶ್ ಅಸೆಂಬ್ಲಿ ಕ್ಷೇತ್ರದ ಚಿತ್ತರಂಜನ್ ಪಾರ್ಕ್ನಲ್ಲಿರುವ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿದರು. ಇವರು 1908 ರಲ್ಲಿ ಜನಿಸಿದ ಬಂಗಾಳಿ ಮಾತನಾಡುವವವರಾಗಿದ್ದಾರೆ.
ಮತದಾನಕ್ಕಾಗಿ ಮಂಡಲ್ ಕುಟುಂಬವು ಮನೆಯಲ್ಲಿ ಅಂಚೆ ಮತಪತ್ರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದರು, ಆದರೆ ಆ ವ್ಯವಸ್ಥೆಯ ಅವಧಿ ಮುಗಿದಿತ್ತು ಎಂದು ಹಿರಿಯ ಮತದಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವಿಭಜಿತ ಭಾರತದಲ್ಲಿ ಜನಿಸಿದ ಮಂಡಲ್ ಅವರು, ರಾಷ್ಟ್ರ ರಾಜಧಾನಿ ದೆಹಲಿಗೆ ಬರುವ ಮೊದಲು ತನ್ನ ಕುಟುಂಬದೊಂದಿಗೆ ಭಾರತದಲ್ಲಿ ಎರಡು ಬಾರಿ ನಿರಾಶ್ರಿತರಾಗಿ ವಾಸಿಸುತ್ತಿದ್ದರು.
ಅವಿಭಜಿತ ಭಾರತದ ಬಾರಿಸಾಲ್(ಈಗ ಬಾಂಗ್ಲಾದೇಶದಲ್ಲಿದೆ)ನಲ್ಲಿ 1908ರಲ್ಲಿ ಇವರು ಜನಿಸಿದ್ದಾರೆ. ಇವರು ದೇಶ ವಿಭಜನೆಯನ್ನು ಎರಡು ಬಾರಿ ಕಂಡವರು, ಅನೇಕ ರೀತಿಯ ವಿದ್ಯಮಾನಗಳಿಗೆ ಸಾಕ್ಷಿಯಾದವರು. ಇವರು ಭಾರತದ ಬಹುತೇಕ ಎಲ್ಲಾ ಚುನಾವಣೆಯಲ್ಲಿ ಭಾಗವಹಿಸಿದ್ದಾರೆ.
ಫೆಬ್ರವರಿ 8ರ ಚುನಾವಣೆಯಲ್ಲಿ 132 ಶತಮಾನೋತ್ಸವದ ಮತದಾರರು - 68 ಪುರುಷರು ಮತ್ತು 64 ಮಹಿಳೆಯರು ತಮ್ಮ ಮತ ಚಲಾಯಿಸಲು ಅರ್ಹರಾಗಿದ್ದಾರೆ ಮತ್ತು ಮತದಾನದ ದಿನದಂದು ಅವರನ್ನು 'ವಿಐಪಿಗಳು' ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರ ಚುನಾವಣೆಯಲ್ಲಿ ತಿಲಕ್ ನಗರದಲ್ಲಿ ವಾಸವಾಗಿದ್ದ ನಗರದ ಅತ್ಯಂತ ಹಳೆಯ ಮತದಾರ ಬಚ್ಚನ್ ಸಿಂಗ್ (111) ಕಳೆದ ಡಿಸೆಂಬರ್ನಲ್ಲಿ ನಿಧನರಾಗಿದ್ದಾರೆ.
1971ರ ಯುದ್ಧಕ್ಕೆ ಕೆಲವು ವರ್ಷಗಳ ಮೊದಲು ಮಂಡಲ್ ಅವರು ಪತಿ ಮತ್ತು ಮಕ್ಕಳೊಂದಿಗೆ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದು ಬಾಂಗ್ಲಾದೇಶದಲ್ಲಿ ನೆಲೆಸಿದ್ದರು. ಮಂಡಲ್ ಅವರು ಮಂದ್ಯಪ್ರದೇಶದಲ್ಲಿ ವಾಸವಿದ್ದ ಸಂದರ್ಭ ಮಂಡಲ್ ಅವರ ಪತಿ ಜ್ಞಾನೇಂದ್ರ ನಿಧನರಾಗಿದ್ದರು. 80ರ ದಶಕದ ಆರಂಭದಲ್ಲಿ, ಮಂಡಲ್ ಅವರ ಇಬ್ಬರು ಗಂಡು ಮಕ್ಕಳು ಕೆಲಸ ಅರಸುತ್ತಾ ದೆಹಲಿಗೆ ಬಂದು ಕೆಲಸ ಆರಂಭಿಸಿದರು. ಇದಾದ ಕೆಲವು ವರ್ಷಗಳ ನಂತರ ಮಂಡಲ್ ಕುಟುಂಬ ಚಿತ್ತರಂಜನ್ ಪಾರ್ಕ್ನಲ್ಲಿ ನೆಲೆಸಿತು.
ಮಂಡಲ್ ಅವರಿಗೆ ಏಳು ಮಕ್ಕಳು. ಅದರಲ್ಲಿ ನಾಲ್ಕು ಗಂಡು ಹಾಗೂ ಮೂವರು ಪುತ್ರಿಯರು. ಈ ಏಳು ಮಂದಿ ಮಕ್ಕಳಲ್ಲಿ ಐದು ಮಂದಿ ತೀರಿಕೊಂಡಿದ್ದಾರೆ. ಈಗ ಸುಖ್ ರಂಜನ್ ಹಾಗೂ ಒಬ್ಬ ಮಗಳಿದ್ದಾರೆ. ಅವರು ಬಾಂಗ್ಲಾದೇಶದಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ತಮ್ಮ ಕುಟುಂಬವನ್ನು ಭೇಟಿಯಾಗಿದ್ದರು.