ನವದೆಹಲಿ, ಫೆ.08 (Daijiworld News/PY): "ಕೇಜ್ರಿವಾಲ್ ಅವರು ಲಿಂಗಬೇಧ ಮಾಡುತ್ತಿದ್ದಾರೆ, ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ತೀರ್ಮಾನಿಸುವ ಸಾಮರ್ಥ್ಯ ಹೊಂದಿದ್ದಾರೆ" ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರು ಟ್ವೀಟ್ ಮಾಡಿ, ದೆಹಲಿ ಮಹಿಳೆಯರು ಮತದಾನ ಮಾಡುವಾಗ ಯಾರಿಗೆ ಮತ ಹಾಕಬೇಕೆಂದು ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಮತದಾನ ಮಾಡಿ ಎಂಬ ಹೇಳಿಕೆ ಪ್ರಕಟಿಸಿದ್ದರು. ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ ಅವರು, "ಕೇಜ್ರಿವಾಲ್ ಅವರು ಲಿಂಗಬೇಧ ಮಾಡುತ್ತಿದ್ದಾರೆ, ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ತೀರ್ಮಾನಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ' ಎಂದರು.
'ಮಹಿಳೆಯರು ಮತದಾನ ಮಾಡುವಾಗ ನಿಮ್ಮ ಮನೆಯ ಗಂಡಸರ ಜೊತೆ ಚರ್ಚಿಸಿ ಎಂದರೆ, ಮಹಿಳೆಯರಿಗೆ ಸ್ವಂತ ಸಾಮರ್ಥ್ಯ ಇಲ್ಲ ಎಂದುಕೊಂಡಿದ್ದೀರಾ. ಈ ರೀತಿ ಹೇಳುವ ಮುಖಾಂತರ ಲಿಂಗಬೇಧ ಮಾಡುತ್ತಿದ್ದೀರಿ' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇರಾನಿ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ಅವರು, 'ಸ್ಮೃತಿ ಇರಾನಿ ಅವರೆ ದೆಹಲಿ ಮಹಿಳೆಯರು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಕುಟುಂಬ ನಿರ್ವಹಣೆಗಾಗಿಯಾದರೂ ಯಾರಿಗೆ ಮತ ಚಲಾಯಿಸಬೇಕೆಂದು ನಿರ್ಧರಿಸಿದ್ದಾರೆ. ಲಿಂಗಬೇಧ ಮಾಡಿಲ್ಲ. ನಾನು ದೆಹಲಿ ಮಹಿಳೆಯರಲ್ಲಿ ವಿಶೇಷ ಮನವಿ ಮಾಡಿದ್ದೇನೆ ಅಷ್ಟೆ' ಎಂದಿದ್ದಾರೆ.
ದೆಹಲಿಯಲ್ಲಿ 1.47 ಕೋಟಿ ಮತದಾರರು ಮತಚಲಾಯಿಸುವ ಹಕ್ಕು ಹೊಂದಿದ್ದು, 672 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇವರಲ್ಲಿ 66.8ಲಕ್ಷ ಮಹಿಳಾ ಮತದಾರರಿದ್ದಾರೆ.