ಕೋಲ್ಕತ್ತ, ಫೆ.08 (Daijiworld News/PY) : ರಾಷ್ಟ್ರವಾದದ ಹೆಸರಿನಲ್ಲಿ ಹರಡಲಾಗುತ್ತಿರುವ ತಪ್ಪುಮಾಹಿತಿಗಳನ್ನು ನಿರಾಕರಿಸಬೇಕು. ದೇಶದಲ್ಲಿ ಅಸಹಿಷ್ಣುತೆ, ಧರ್ಮಾಂಧತೆ, ದ್ವೇಷದ ಗಾಳಿಯು ಆವರಿಸಿದೆ. ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ತೊಡೆದುಹಾಕಬೇಕಿದೆ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗ್ದೀಪ್ ಧನ್ಕರ್ ಹೇಳಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮೊದಲು ಸರ್ಕಾರ ಸಿದ್ದಪಡಿಸಿದ ಭಾಷಣವನ್ನೇ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗ್ದೀಪ್ ಧನ್ಕರ್ ಬಜೆಟ್ ಅಧಿವೇಶನದಲ್ಲಿ ಯಥಾವತ್ತಾಗಿ ಓದಿದ್ದು, ಭಾಷಣದ ಅಂಶಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ.ಈ ಸಂದರ್ಭ ರಾಜ್ಯಪಾಲರು ಎನ್ಆರ್ಸಿ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು.
ಪ್ರಜಾಪ್ರಭುತ್ವದ ಉಳಿವು ಅಂಕಿಗಳ ಮೇಲಿಲ್ಲ. ಎಲ್ಲ ನಾಗರಿಕರ ಭದ್ರತೆ ಮತ್ತು ಭಾವನೆಗಳ ರಕ್ಷಣೆಯ ಮೇಲಿದೆ. ಸಂವಿಧಾನದ ಮೂಲ ಆಶಯಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ.
ಎನ್ಪಿಆರ್, ಎನ್ಆರ್ಸಿ ಹೆಸರಿನಲ್ಲಿ ಜನರಲ್ಲಿ ಒಡಕು ಮೂಡಿಸುವ ಪ್ರಯತ್ನಗಳನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.