ಹಾಸನ, ಫೆ.08 (Daijiworld News/PY): ವಧು ಧರಿಸಿದ ಸೀರೆಯ ಗುಣಮಟ್ಟವನ್ನು ವರನ ಕುಟುಂಬ ನಿರಾಕರಿಸಿದ ಕಾರಣ ವಿವಾಹದಿಂದ ವರ ಹೊರನಡೆದಿದ್ದು, ವಿವಾಹವೇ ನಿಂತ ಘಟನೆ ಹಾಸನದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ವರನನ್ನು ಹಾಸನ ಸಮೀಪದ ಹಳ್ಳಿಯ ಬಿ.ಎನ್.ರಘುಕುಮಾರ್ (29) ಹೇಳಲಾಗಿದ್ದು, ಆತ ಪರಾರಿಯಾಗಿದ್ದಾನೆ. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಸಕ್ತಿ ತೋರಿಸದ ರಘುಕುಮಾರ್ ಪೋಷಕರ ನಿರ್ದೇಶನದಂತೆ ನಡೆದುಕೊಂಡಿದ್ದು, ಈ ಘಟನೆ ಬುಧವಾರ ನಡೆದಿದೆ.
ನಾವು ರಘುಕುಮಾರ್ ವಿರುದ್ದ ಮೋಸ ಪ್ರಕರಣ ದಾಖಲಿಸಿದ್ದೇವೆ. ಆದರೆ ಆತ ಪರಾರಿಯಾಗಿದ್ದಾನೆ. ವಿವಾಹವನ್ನು ರದ್ದುಗೊಳಿಸಿದ ಕಾರಣಕ್ಕೂ ರಘುಕುಮಾರ್ ಅವರ ಕುಟುಂಬದ ಸದಸ್ಯರ ಮೇಲೂ ಮೋಸ ಪ್ರಕರಣದಲ್ಲಿ ಕೇಸು ದಾಖಲಾಗಿದೆ ಎಂದು ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
ರಘುಕುಮಾರ್ ಹಾಗೂ ಸಂಗೀತಾ ಅವರು ಒಂದು ವರ್ಷದಿಂದ ಪ್ರೀತಿಸುತ್ತಿದ್ದು ಆಯಾ ಕುಟುಂಬಗಳ ಒಪ್ಪಿಗೆ ಪಡೆದುಕೊಂಡ ಬಳಿಕ ವಿವಾಹವಾಗಲು ನಿರ್ಧರಿಸಿದ್ದರು. ಆದರೆ, ರಘುಕುಮಾರ್ ಅವರ ಪೋಷಕರು ವಿವಾಹದ ಸಂಪ್ರದಾಯ ನಡೆಯುತ್ತಿದ್ದ ಸಂದರ್ಭ ಸೀರೆ ಗುಣಮಟ್ಟದಲ್ಲ ಎಂದು ವಿವಾಹವನ್ನೆ ಬೇಡವೆಂದು ಹೇಳಿ ಅಲ್ಲಿಂದ ಹೊರನಡೆದಿದ್ದಾರೆ.
ಈ ವಿವಾದದ ಬಳಿಕ, ರಘುಕುಮಾರ್ ಅವರ ಪೋಷಕರು ಗುರುವಾರ ನಿಗದಿಯಾಗಿದ್ದ ಮದುವೆಯನ್ನು ರದ್ದುಗೊಳಿಸಿ ತಮ್ಮ ಮಗನನ್ನು ಪರಾರಿಯಾಗುವಂತೆ ತಿಳಿಸಿದ್ದರು ಎನ್ನಲಾಗಿದೆ.