ಹಾಸನ,ಫೆ 9 (Daijiworld News/MSP): ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತವನ್ನು "ಹಿಂದೂರಾಷ್ಟ್ರ"ವನ್ನಾಗಿಸುವ ಕನಸು ಕಾಣುತ್ತಿದ್ದಾರೆ. ಆದರೆ ಇದಕ್ಕೆ ಜಾತ್ಯಾತೀತ ಶಕ್ತಿಗಳು ಅಡ್ಡಿಯಾಗಿ ಅವರ ಕನಸು ಮುರಿಯಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.
ಅವರು ಹಾಸನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ವಿರೋಧಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಗೃಹ ಸಚಿವ ಶಾ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಭಾರತ ಬಹುಭಾಷೆಯ ಜಾತ್ಯತೀತ ರಾಷ್ಟ್ರ ಎಂಬುದನ್ನು ಅಮಿತ್ ಶಾ ಮರೆತಿದ್ದಾರೆ. ಅವರ ಕನಸಿನಂತೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಎಂದು ಸಾಧ್ಯವಿಲ್ಲ. ದೇಶದ ಶಾಂತಿ, ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಜನರು ಮುಂದೆ ಬಂದು ದೇಶವಿರೋಧಿ ಕಾಯ್ದೆಗಳನ್ನು ವಿರೋಧಿಸಬೇಕುಮತ್ರವಲ್ಲದೆ ಜಾತ್ಯತೀತ ಮುಖಂಡರು ಒಗ್ಗಟ್ಟಾಗಿ ಕೇಂದ್ರವು ಮಂಡಿಸಿರುವ ಪ್ರಜಾಪ್ರಭುತ್ವ ವಿರೋಧಿ ನೀತಿಗಳ ವಿರುದ್ಧ ಹೋರಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.