ಹುಬ್ಬಳ್ಳಿ, ಫೆ.09 (Daijiworld News/PY): "ಈ ಬಾರಿಯ ಬಜೆಟ್ನಲ್ಲಿ ಸಹಕಾರ ಬ್ಯಾಂಕ್ಗಳ ರೈತರ ಬಡ್ಡಿ ಹಾಗೂ ಸುಸ್ತಿರಬಡ್ಡಿ ಮನ್ನಾ ಮಾಡಲಾಗುವುದು" ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡಲಿರುವ ಅವರು, ಮಾ.5ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ಗಾಗಿ ಈಗಾಗಲೇ ಸಿದ್ದತೆ ನಡೆಯುತ್ತಿದೆ. ಈ ಬಾರಿಯ ಬಜೆಟ್ನಲ್ಲಿ ಸಹಕಾರ ಬ್ಯಾಂಕ್ಗಳ ರೈತರ ಬಡ್ಡಿ ಹಾಗೂ ಸುಸ್ತಿರಬಡ್ಡಿ ಮನ್ನಾ ಮಾಡಲಾಗುವುದು. ಬಡ್ಡಿ ಮನ್ನಾದಿಂದ 400 ಕೋಟಿ ರೂಪಾಯಿಗೂ ಹೆಚ್ಚು ಹೊರೆಯಾಗಲಿದೆ ಎಂದು ತಿಳಿಸಿದರು.
ಕೆಲ ದಿನಗಳಲ್ಲಿ ದೆಹಲಿಗೆ ಹೋಗಿ ಮಹದಾಯಿ ವಿಚಾರವಾಗಿ ಮಾತನಾಡುತ್ತೇನೆ. ಈ ವಿಚಾರವಾಗಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಸಿದ್ದತೆ ನಡೆಯುತ್ತಿದೆ ಎಂದರು.