ನವದೆಹಲಿ, ಫೆ 10 (Daijiworld News/MSP): ಸರ್ಕಾರಿ ಬ್ಯಾಂಕ್ಗಳ ವಿಲೀನಕ್ಕೆ ಸಮಾಜದ ವಿವಿಧ ವಲಯಗಳಿಂದ ವಿರೋಧ ಇರುವ ಹೊರತಾಗಿಯೂ, ಅಗತ್ಯ ಬಿದ್ದರೆ ಇನ್ನಷ್ಟು ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ವಿಲೀನಕ್ಕೆ ಸರ್ಕಾರ ಸಿದ್ಧ ಎನ್ನುವ ಮೂಲಕ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತೊಮ್ಮೆ ಬ್ಯಾಂಕ್ ವಿಲೀನದ ಮಾಡುವ ಸುಳಿವು ನೀಡಿದ್ದಾರೆ.
ಈ ಹಿಂದೆ ನಾವು ಹಲವು ಬ್ಯಾಂಕ್ಗಳ ವಿಲೀನ ಮತ್ತು ಮರುಬಂಡವಾಳ ಹೂಡಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ದಿವಾಳಿ ಸಂಹಿತೆ ಕೂಡಾ ಯಶಸ್ವಿಯಾಗಿದ್ದು ಇದರಿಂದ 4 ಲಕ್ಷ ಕೋಟಿ ರೂ. ಉಳಿತಾಯವಾಗಿದೆ. ಹೀಗಾಗಿ ಮುಂದೆ ಸಹ ಅಗತ್ಯಕ್ಕೆ ತಕ್ಕಂತೆ ವಿಲೀನ ಪ್ರಕ್ರಿಯೆ ನಡೆಯಬಹುದು ಎಂದಿದ್ದಾರೆ.
ಏಪ್ರಿಲ್ ವೇಳೆಗೆ ದೇಶದಲ್ಲಿ 6 ಜಾಗತಿಕ ಗಾತ್ರದ ಬ್ಯಾಂಕ್ ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರ , ಸಾರ್ವಜನಿಕ ಕ್ಷೇತ್ರದ 10 ಬ್ಯಾಂಕ್ ಗಳನ್ನು ವಿಲೀನಗೊಳಿಸಿ ನಾಲ್ಕು ದೊಡ್ಡ ಬ್ಯಾಂಕ್ ಗಳನ್ನು ಆಸ್ತಿತ್ವಕ್ಕೆ ತರುವ ಮಹಾ ವಿಲೀನ ನಿರ್ಧಾರವನ್ನು ಕಳೆದ ವರ್ಷ ಪ್ರಕಟಿಸಿತ್ತು.